ADVERTISEMENT

ಹರಭಜನ್ ಜತೆ ಸೆಲ್ಫಿ ಕ್ಲಿಕ್ಕಿಸಿದ ಸಿಧು; ಕಾಂಗ್ರೆಸ್‌‌ಗೆ ಸೇರ್ಪಡೆ?

ಪಿಟಿಐ
Published 16 ಡಿಸೆಂಬರ್ 2021, 1:26 IST
Last Updated 16 ಡಿಸೆಂಬರ್ 2021, 1:26 IST
ಹರಭಜನ್ ಸಿಂಗ್ ಜತೆ ಸೆಲ್ಫಿ ಕ್ಲಿಕ್ಕಿಸಿದ ನವಜೋತ್ ಸಿಂಗ್ ಸಿಧು
ಹರಭಜನ್ ಸಿಂಗ್ ಜತೆ ಸೆಲ್ಫಿ ಕ್ಲಿಕ್ಕಿಸಿದ ನವಜೋತ್ ಸಿಂಗ್ ಸಿಧು   

ಚಂಡೀಗಡ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಭಾರತದ ಕ್ರಿಕೆಟಿಗ ಹರಭಜನ್ ಸಿಂಗ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ್ದಾರೆ.

ಇದರೊಂದಿಗೆ ಹರಭಜನ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯ ಕುರಿತಂತೆ ಊಹಾಪೋಹಾಗಳು ಗರಿಗೆದರಿವೆ.

ಭಾರತದ ಮಾಜಿ ಕ್ರಿಕೆಟಿಗರೂ ಆಗಿರುವ ಸಿಧು, ಈ ಕುರಿತು ಟ್ವೀಟ್ ಮಾಡಿದ್ದು, ಕುತೂಹಲ ಕೆರಳಿಸಿದೆ. 'ಚಿತ್ರವು ಅನೇಕ ಸಾಧ್ಯತೆಗಳೊಂದಿಗೆ ತುಂಬಿದೆ...ಮಿಂಚಿನ ತಾರೆ ಭಜ್ಜಿ ಅವರೊಂದಿಗೆ' ಎಂದು ಹೇಳಿದ್ದಾರೆ.

ADVERTISEMENT

ಬಳಿಕ ಪ್ರತಿಕ್ರಿಯಿಸಿರುವ ಸಿಧು, 'ನನ್ನ ಮಾತು ಕೇಳಿ, ಈ ಫೋಟೊ ಎಲ್ಲವನ್ನೂ ವಿವರಿಸುತ್ತದೆ. ನಾನು ಹೇಳಿದ್ದು, ಹಲವು ಸಾಧ್ಯತೆಗಳಿಂದ ತುಂಬಿದೆ. ಹಲವು ಸಾಧ್ಯತೆಗಳಿದ್ದು, ಅವುಗಳು ಸಾಧ್ಯವಾಗಬಹುದು' ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹರಭಜನ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೆಲವು ದಿನಗಳ ಹಿಂದೆಯಷ್ಟೇ, ಯುವರಾಜ್ ಸಿಂಗ್ ಜತೆಗೆ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಿರುವ ಹರಭಜನ್ ಸಿಂಗ್, ಊಹಾಪೋಹಾಗಳಿಗೆ ತೆರೆ ಎಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.