ADVERTISEMENT

ಎಸ್‌ಐಆರ್‌ ಅರ್ಜಿ ಭರ್ತಿ: ನಗರಗಳಿಗಿಂತ ಗ್ರಾಮೀಣ ಪ್ರದೇಶಗಳೇ ಮುಂದು

ಪಿಟಿಐ
Published 2 ಜನವರಿ 2026, 14:30 IST
Last Updated 2 ಜನವರಿ 2026, 14:30 IST
   

ನವದೆಹಲಿ: ಒಂಬತ್ತು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್‌ಐಆರ್‌) ನಡೆದಿದೆ. ಆದರೆ, ಭರ್ತಿ ಮಾಡಿದ ಅರ್ಜಿಗಳನ್ನು ಮರಳಿ ನೀಡುತ್ತಿರುವವರ ಸಂಖ್ಯೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಅಧಿಕ ಎಂದು ಚುನಾವಣಾ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. 

ಇಂಥ ವಿದ್ಯಮಾನಕ್ಕೆ ಹಲವು ಕಾರಣಗಳೂ ಇವೆ. ಉದ್ಯೋಗದ ಕಾರಣಕ್ಕೆ ನಗರ ಪ್ರದೇಶಗಳಲ್ಲಿ ಮತದಾರರು ಮನೆಗಳಲ್ಲಿ ಸಿಗುವುದು ಕಡಿಮೆ. ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲು ಚುನಾವಣಾ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿದ ವೇಳೆ, ಅವುಗಳನ್ನು ಮರಳಿಸಲು ಯಾರೂ ಇರುವುದಿಲ್ಲ. ಅಲ್ಲದೇ, ವಲಸೆ ಹೋಗುತ್ತಿರುವುದು ಕೂಡ ಮತ್ತೊಂದು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ಪುದುಚೆರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ನವೆಂಬರ್‌ 4ರಿಂದ ಎರಡನೇ ಹಂತದ ‘ಎಸ್‌ಐಆರ್‌’ ಆರಂಭವಾಗಿತ್ತು.

ADVERTISEMENT

ಪ್ರಮುಖ ಅಂಶಗಳು

  • ಲಖನೌ ಕಾನ್ಪುರ ಹಾಗೂ ನೋಯ್ಡಾಗಳಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಚುನಾವಣಾ ಸಿಬ್ಬಂದಿಗೆ ಮರಳಿಸುತ್ತಿರುವವರ ಸಂಖ್ಯೆ ಕಡಿಮೆ ಇತ್ತು

  • ಉತ್ತರ ಪ್ರದೇಶ ಹೊರತುಪಡಿಸಿ ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದೆ

  • ಅಸ್ಸಾಂನಲ್ಲಿ ಪ್ರತ್ಯೇಕವಾದ ‘ವಿಶೇಷ ಪರಿಷ್ಕರಣೆ’ ಪ್ರಗತಿಯಲ್ಲಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.