
ಕೋಲ್ಕತ್ತ: ಚುನಾವಣಾ ಆಯೋಗವು ಕೈಗೊಳ್ಳುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು(ಎಸ್‌ಐಆರ್) ಹಾವಿನ ಹುತ್ತದೊಳಗೆ ಕಾರ್ಬಾಲಿಕ್ ಆಮ್ಲ ಸುರಿದಂತೆ ಎಂದು ಹೋಲಿಕೆ ಮಾಡಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ‘ಇದು ಪಶ್ಚಿಮ ಬಂಗಾಳದಲ್ಲಿ ನೆಲಸಿರುವ ನುಸುಳುಕೋರರನ್ನು ಹೊರೆಗೆಳೆಯುವ ಪ್ರಕ್ರಿಯೆ’ ಎಂದು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಡಳಿತಾರೂಢ ಟಿಎಂಸಿ ನೆರವಿನಿಂದ ನುಸುಳುಕೋರರು ರಾಜ್ಯದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಗಡಿಪಾರು ಮಾಡಲಾಗುವುದು’ ಎಂದು ಹೇಳಿದ್ದಾರೆ.
‘ಹುತ್ತದೊಳಗೆ ಕಾರ್ಬಾಲಿಕ್ ಆಮ್ಲ ಸುರಿದಾಗ ಹಾವುಗಳು ಹೊರಬರುತ್ತವೆ. ಅವುಗಳನ್ನು ಹಿಡಿದು ಹೊರಗೆ ಎಸೆಯಲಾಗುತ್ತದೆ. ಚುನಾವಣಾ ಆಯೋಗವು ನುಸುಳುಕೋರರ ಸಮಸ್ಯೆಗೆ ‘ಎಸ್‌ಐಆರ್’ ಎಂಬ ಸೂಕ್ತ ಔಷಧಿ ಬಳಕೆ ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.