
ಪಿಟಿಐ
ಅಮೇಠಿ: ಮತದಾರರಿಗೆ ಭರವಸೆ ನೀಡಿದಂತೆ ಕ್ಷೇತ್ರದೊಂದಿಗೆ ಕುಟುಂಬದ ನಂಟು ಬೆಸೆದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಠಿ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದಾರೆ.
ಸಂಸದರ ಪ್ರತಿನಿಧಿ ವಿಜಯ್ ಗುಪ್ತ ಅವರ ಪ್ರಕಾರ, ಸ್ಮೃತಿ ಅವರು ಗೌರಿಗಂಜ್‌ನ ಮೇದನ್ ಮವಯಿ ಹಳ್ಳಿಯಲ್ಲಿ ಫೆಬ್ರುವರಿ 2024ರಲ್ಲಿ ಮನೆ ನಿರ್ಮಿಸಿದ್ದರು. ನಂತರ ಇಲ್ಲಿನ ಮತದಾರರಾಗಲು ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವರು ಹಳ್ಳಿಯ ಮತದಾರರಾಗಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.
ಬಿಜೆಪಿ ಸ್ಮೃತಿ ಇರಾನಿ ಅವರನ್ನು ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.