ADVERTISEMENT

ಲಡಾಖ್‌ | ಕಂದಕಕ್ಕೆ ಉರುಳಿದ ಬಸ್‌: ಆರು ಸಾವು, 22 ಮಂದಿಗೆ ಗಾಯ

ಪಿಟಿಐ
Published 22 ಆಗಸ್ಟ್ 2024, 11:08 IST
Last Updated 22 ಆಗಸ್ಟ್ 2024, 11:08 IST
<div class="paragraphs"><p>ಉರುಳಿ ಬಿದ್ದಿರುವ ಬಸ್ (ಪಾತ್ರಿನಿಧಿಕ ಚಿತ್ರ)&nbsp;</p></div>

ಉರುಳಿ ಬಿದ್ದಿರುವ ಬಸ್ (ಪಾತ್ರಿನಿಧಿಕ ಚಿತ್ರ) 

   

ಪಿಟಿಐ ಚಿತ್ರ

ಲೇಹ್: ಲಡಾಖ್‌ನ ಲೇಹ್ ಜಿಲ್ಲೆಯಲ್ಲಿ ಶಾಲಾ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಬಸ್‌ವೊಂದು ಕಂದಕಕ್ಕೆ ಉರುಳಿದ ಪರಿಣಾಮ 6 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕಾರ್ಯಕ್ರಮವೊಂದಕ್ಕೆ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್‌ ದುರ್ಬುಕ್ ಪ್ರದೇಶದಲ್ಲಿ ಕಂದಕಕ್ಕೆ ಉರುಳಿದೆ ಎಂದು ಜಿಲ್ಲಾಧಿಕಾರಿ ಸಂತೋಷ್ ಸುಖದೇವ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಪೊಲೀಸ್ ಮತ್ತು ಜಿಲ್ಲಾಡಳಿತದವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಗಾಯಗೊಂಡ 22 ಜನರನ್ನು ಲೇಹ್‌ನಲ್ಲಿರುವ ಎಸ್‌ಎನ್‌ಎಂ ಆಸ್ಪತ್ರೆ ಮತ್ತು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ ಎಂದು ಸುಖದೇವ್ ಮಾಹಿತಿ ನೀಡಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸುಖದೇವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.