ADVERTISEMENT

ಕ್ಯಾನ್ಸರ್ ವಿರುದ್ಧ ಹೋರಾಡಲು ಮಗನೇ ಧೈರ್ಯ: ಸೋನಾಲಿ ಬೇಂದ್ರೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 14:01 IST
Last Updated 19 ಜುಲೈ 2018, 14:01 IST
ಮಗ ರಣವೀರ್‌ ಜತೆ ಸೋನಾಲಿ ಬೇಂದ್ರೆ –ಚಿತ್ರ: ಇನ್‌ಸ್ಟಾಗ್ರಾಂ
ಮಗ ರಣವೀರ್‌ ಜತೆ ಸೋನಾಲಿ ಬೇಂದ್ರೆ –ಚಿತ್ರ: ಇನ್‌ಸ್ಟಾಗ್ರಾಂ    

ಮುಂಬೈ: ಕ್ಯಾನ್ಸರ್ ಇರುವ ವಿಚಾರವನ್ನು ಮಗ ರಣವೀರ್‌ಗೆ ತಿಳಿಸಿದ್ದಾಗಿ ನಟಿ ಸೋನಾಲಿ ಬೇಂದ್ರೆ ಹೇಳಿದ್ದಾರೆ. ಸದ್ಯ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮಗನ ಜೊತೆಗಿರುವ ಫೊಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟಕ್ಕೆಮಗನ ಸಕಾರಾತ್ಮಕತೆ ಹಾಗೂ ಧೈರ್ಯವೇ ಸ್ಫೂರ್ತಿ ಎಂದಿದ್ದಾರೆ.

ಮೆಟಸ್ಟ್ಯಾಟಿಸ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಇತ್ತೀಚೆಗೆ ಅವರು ಬಹಿರಂಗಪಡಿಸಿದ್ದರು.

ADVERTISEMENT

‘ಕ್ಯಾನ್ಸರ್ ಇರುವ ವಿಚಾರವನ್ನು ರಣವೀರ್‌ಗೆ ಹೇಳುವುದೋ, ಬೇಡವೋ ಎಂಬ ಗೊಂದಲದಲ್ಲಿ ನಾನು ಹಾಗೂ ಬೆಹ್ಲ್ (ಪತಿ) ಇದ್ದೆವು. ಎಲ್ಲವನ್ನೂ ಮುಕ್ತವಾಗಿ ಚರ್ಚಿಸುತ್ತಿದ್ದ ನಮಗೆ ಇದು ಕಷ್ಟವೆನಿಸಲಿಲ್ಲ. ಅವನೂ ಕೂಡಾ ಸಕಾರಾತ್ಮಕವಾಗಿಯೇ ಸ್ವೀಕರಿಸಿದ. ನಾನು ಮಾಡಬೇಕಾದ ಕೆಲಸಗಳನ್ನು ಆಗಾಗ್ಗೆ ನೆನಪಿಸುತ್ತಾನೆ’ ಎಂದು ಸೋನಾಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.