ADVERTISEMENT

ಉತ್ತರ ಪ್ರದೇಶ ಚುನಾವಣೆ 2022: ಮೈತ್ರಿ ಘೋಷಿಸಿದ ಎಸ್‌ಪಿ–ಎಸ್‌ಬಿಎಸ್‌ಪಿ

ಪಿಟಿಐ
Published 27 ಅಕ್ಟೋಬರ್ 2021, 14:52 IST
Last Updated 27 ಅಕ್ಟೋಬರ್ 2021, 14:52 IST
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌    

ಮಾವು, ಉತ್ತರ ಪ್ರದೇಶ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಜಂಟಿಯಾಗಿ ಸ್ಪರ್ಧಿಸಲು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಸುಹೇಲ್‌ದೇವ್‌ ಭಾರತೀಯ ಸಮಾಜವಾದಿ ಪಕ್ಷವು (ಎಸ್‌ಬಿಎಸ್‌ಪಿ) ಬುಧವಾರ ತಮ್ಮ ಮೈತ್ರಿಯನ್ನು ಘೋಷಿಸಿವೆ.

ಬಿಜೆಪಿಯನ್ನುರಾಜ್ಯದಿಂದ ಹೊರಹಾಕಿರಿ ಎಂಬ ಘೋಷಣೆಯನ್ನು ಎರಡೂ ಪಕ್ಷಗಳು ಇದೇ ವೇಳೆ ಪ್ರಕಟಿಸಿದವು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ವಿಧಾನಸಭೆ ಚುನಾವಣೆಗೆ ಎರಡು ಪಕ್ಷಗಳ ಮೈತ್ರಿಯನ್ನು ಘೋಷಿಸಿ ಮಾತನಾಡಿದರು.

ADVERTISEMENT

‘ಎಸ್‌ಪಿ ಮತ್ತು ಎಸ್‌ಬಿಎಸ್‌ಪಿಯ ಕೆಂಪು ಮತ್ತು ಹಳದಿ ಬಣ್ಣಗಳು ಒಂದಾದಾಗ ದೆಹಲಿ ಮತ್ತು ಲಖನೌದಲ್ಲಿ ಯಾರು ಕೋಪಗೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಯಾದವ್‌ ಅವರು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳನ್ನು ಉಲ್ಲೇಖಿಸಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.