ADVERTISEMENT

ಗುವಾಹಟಿ: ಲ್ಯಾಂಡಿಂಗ್ ವೇಳೆ ರನ್‌ವೇ ದೀಪಗಳಿಗೆ ಬಡಿದ ಸ್ಪೈಸ್‌ಜೆಟ್‌ ವಿಮಾನ

ಏಜೆನ್ಸೀಸ್
Published 6 ಡಿಸೆಂಬರ್ 2020, 5:11 IST
Last Updated 6 ಡಿಸೆಂಬರ್ 2020, 5:11 IST
   

ನವದೆಹಲಿ:ಸ್ಟೈಸ್‌ಜೆಟ್‌ ಎಸ್‌ಜಿ–960 ವಿಮಾನದ ಲ್ಯಾಂಡಿಂಗ್‌ ವೇಳೆ ಪೈಲಟ್‌ಗಳು ವಿಮಾನದ ಎತ್ತರವನ್ನು ಅಂದಾಜಿಸುವಲ್ಲಿ ವಿಫರಾಗಿದ್ದು, ಸರಳ ಲ್ಯಾಂಡಿಂಗ್‌ಗೆ ಅಡಚಣೆಯಾಗಿದೆ. ಹೀಗಾಗಿ ರನ್‌ವೇ ಬಳಿ ಇದ್ದ ಮೂರು ದೀಪಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಶನಿವಾರ ಬೆಂಗಳೂರಿನಿಂದ ಗುವಾಹಟಿಗೆ ಪ್ರಯಾಣ ಬೆಳೆಸಿದ್ದ ಈ ವಿಮಾಣದಲ್ಲಿ ಇಬ್ಬರು ಪೈಲಟ್‌ಗಳು, ನಾಲ್ವರು ಸಿಬ್ಬಂದಿ ಹಾಗೂ 155 ಪ್ರಯಾಣಿಕರಿದ್ದರು ಎನ್ನಲಾಗಿದೆ.

‘ಕಡಿಮೆ ಮೋಡವಿದ್ದ ಕಾರಣ ಪೈಲಟ್‌ಗಳು ವಿಮಾನದ ಎತ್ತರವನ್ನು ಗ್ರಹಿಸಲು ವಿಫಲರಾಗಿದ್ದರು. ಇದರಿಂದಾಗಿ ವಿಮಾನದ ಲ್ಯಾಂಡಿಂಗ್‌ ಕೊನೆಯ ಕ್ಷಣದವರೆಗೂ ಅನಿರೀಕ್ಷಿತವಾಗಿತ್ತು. ಇದು ಸರಳ ಲ್ಯಾಂಡಿಂಗ್ ಸಾಧ್ಯವಾಗದಿರಲು ಕಾರಣವಾಯಿತು. ವಿಮಾನವನ್ನು ರನ್‌ವೇ–2ರಲ್ಲಿ ಇಳಿಸಲಾಯಿತು‘ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ)ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ತನಿಖೆಗೆ ಹಾಜರಾಗುವಂತೆ ಇಬ್ಬರೂ ಪೈಲಟ್‌ಗಳಿಗೆ ಡಿಜಿಸಿಎ ಸೂಚಿಸಿದೆ.

ವಿಮಾನವನ್ನು ಪಾರ್ಕಿಂಗ್‌ಗೆ ಸ್ಥಳಾಂತರಿಸಿದ ಬಳಿಕ ತಪಾಸಣೆ ನಡೆಸಲಾಗಿದ್ದು, ಟೈರ್‌ಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.