ADVERTISEMENT

ಉತ್ತರ ರಾಜ್ಯಗಳಲ್ಲೇಕೆ ಕೇಂದ್ರ ತಮಿಳು ಕಲಿಕೆಗೆ ಸಂಸ್ಥೆ ಸ್ಥಾಪಿಸಿಲ್ಲ?: ಸ್ಟಾಲಿನ್

ಪಿಟಿಐ
Published 4 ಮಾರ್ಚ್ 2025, 6:24 IST
Last Updated 4 ಮಾರ್ಚ್ 2025, 6:24 IST
   

ಚೆನ್ನೈ: ಹಿಂದಿ ಹೇರಿಕೆ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌, ಉತ್ತರ ಭಾರತದ ರಾಜ್ಯಗಳ ಜನರಿಗೆ ತಮಿಳು ಅಥವಾ ಇತರ ದಕ್ಷಿಣ ಭಾರತೀಯ ಭಾಷೆಗಳನ್ನು ಕಲಿಸಲು ಕೇಂದ್ರ ಸರ್ಕಾರವು ಒಂದು ಸಂಸ್ಥೆಯನ್ನು ಸ್ಥಾಪಿಸಲು ಏಕೆ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.

ಗೂಗಲ್‌ ಟ್ರಾನ್ಸ್‌ಲೇಟರ್‌, ಚಾಟ್‌ಜಿಪಿಟಿ ಮತ್ತು ಕೃತಕ ಬುದ್ಧಿಮತ್ತೆಯಂತಹ ಸಾಧನಗಳು ಜನರಿಗೆ ಭಾಷೆಯ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿದೆ, ಹೀಗಿದ್ದಾಗ ಅಗತ್ಯ ತಂತ್ರಜ್ಞಾನವನ್ನು ಮಾತ್ರ ಕಲಿಯುವುದು ಮತ್ತು ಭಾಷೆಯನ್ನು ಹೇರುವುದು ಅವರಿಗೆ ಹೊರೆಯಾಗುತ್ತದೆ ಎಂದಿದ್ದಾರೆ.

ದಕ್ಷಿಣ ರಾಜ್ಯಗಳ ಜನರು ಹಿಂದಿ ಕಲಿಯುವುದರಿಂದ ಮತ್ತು ಉತ್ತರ ರಾಜ್ಯಗಳ ಜನರು ದಕ್ಷಿಣದ ಭಾಷೆಗಳನ್ನು ಕಲಿಯುವುದರಿಂದ ರಾಷ್ಟ್ರೀಯ ಏಕತೆ ನಿರ್ಮಾಣವಾಗುತ್ತದೆ ಎನ್ನುವ ಕಾರಣಕ್ಕೆ ಮಹಾತ್ಮ ಗಾಂಧೀಜಿಯವರ ಆಶಯದಂತೆ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ’ಯನ್ನು ಸ್ಥಾಪಿಸಲಾಗಿದೆ. ಚೆನ್ನೈನಲ್ಲಿರುವ ಸಭೆಯ ಪ್ರಧಾನ ಕಚೇರಿಯಲ್ಲಿ ಗಾಂಧೀಜಿ ಸ್ವತಃ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈಗ, ಸಭೆಯು ದಕ್ಷಿಣ ರಾಜ್ಯಗಳಲ್ಲಿ 6,000 ಕೇಂದ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದರೆ ಉತ್ತರ ರಾಜ್ಯಗಳ ಜನರು ದಕ್ಷಿಣದ ರಾಜ್ಯಗಳ ಒಂದು ಭಾಷೆಯನ್ನಾದರೂ ಕಲಿಯಲು ಅನುಕೂಲವಾಗುವಂತೆ ‘ಉತ್ತರ ಭಾರತ ತಮಿಳು ಪ್ರಚಾರ ಸಭಾ’ ಅಥವಾ ’ದ್ರಾವಿಡ ಭಾಷಾ ಸಭಾ’ದಂತಹ ಸಂಘಟನೆಯನ್ನು ಉತ್ತರ ಭಾರತದಲ್ಲಿ ಸ್ಥಾಪಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಈ ವೇಳೆ ಯಾರ ಹೆಸರನ್ನೂ ನಿರ್ದಿಷ್ಟವಾಗಿ ಸ್ಟಾಲಿನ್‌ ಉಲ್ಲೇಖಿಸಲಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.