ADVERTISEMENT

ವಿದ್ಯಾರ್ಥಿಗಳು ವರದಕ್ಷಿಣೆ ವಿರೋಧಿ ಕರಾರುಪತ್ರಕ್ಕೆ ಸಹಿಹಾಕಲಿ: ಕೇರಳ ರಾಜ್ಯಪಾಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2021, 3:35 IST
Last Updated 17 ಜುಲೈ 2021, 3:35 IST
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌   

ಕೊಚ್ಚಿ:ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣಪತ್ರಗಳನ್ನು ಪಡೆಯುವ ಮೊದಲು ತಾವು ವರದಕ್ಷಿಣೆ ಪಡೆಯುವುದಿಲ್ಲ ಮತ್ತು ನೀಡುವುದಿಲ್ಲ ಎಂಬ ಕರಾರುಪತ್ರಕ್ಕೆ ಸಹಿಹಾಕುವಂತೆ ಮಾಡಬೇಕು ಎಂದು ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಸಲಹೆ ನೀಡಿದ್ದಾರೆ.

ʼವಿದ್ಯಾರ್ಥಿಗಳಿಗೆ ದಾಖಲಾತಿ ಸಂದರ್ಭದಲ್ಲಿ ಮಾತ್ರವಲ್ಲದೆ, ಅವರಿಗೆ ಪದವಿ ಪ್ರಮಾಣ ಪತ್ರಗಳನ್ನುನೀಡುವ ಮುನ್ನ ಅವರು ವರದಕ್ಷಿಣೆ ಕರಾರುಪತ್ರಕ್ಕೆ ಸಹಿಹಾಕುವಂತೆ ಮಾಡಬೇಕು. ಜೊತೆಗೆ ವಿಶ್ವವಿದ್ಯಾಲಯದಲ್ಲಿ ನೇಮಕಗೊಳ್ಳುವ ಪ್ರತಿಯೊಬ್ಬರಿಗೂಈ ಕರಾರುಪತ್ರಕ್ಕೆ ಸಹಿಹಾಕುವಂತೆ ಸೂಚಿಸಬೇಕುʼ ಎಂದು ಖಾನ್‌ ಹೇಳಿದ್ದಾರೆ.

ʼಕರಾರುಪತ್ರಕ್ಕೆ ಸಹಿ ಮಾಡುವುದು ವಿದ್ಯಾರ್ಥಿಗಳಿಗಷ್ಟೇಸೀಮಿತವಾಗಬಾರದು. ಸಿಬ್ಬಂದಿಯೂ ಸಹಿ ಮಾಡುವಂತಾಗಬೇಕು. ಉಪಕುಲಪತಿಗಳೊಂದಿಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಮದುವೆ ಮಾರುಕಟ್ಟೆಯಲ್ಲಿವದು-ವರರಬೆಲೆ ಹೆಚ್ಚಿಸಲು ಪದವಿ ಪತ್ರಗಳು ನೆರವಾಗುವುದಕ್ಕೆ ವಿಶ್ವವಿದ್ಯಾಲಯಗಳು ಅನುಮತಿಸಬಾರದುʼ ಎಂದು ಸೂಚಿಸಿದ್ದಾರೆ.

ADVERTISEMENT

ಮುಂದುವರಿದು,ʼಇದು ಕೇವಲ ಮಹಿಳೆಯರ ವಿಚಾರವಲ್ಲ. ಇದು ಮನುಕುಲದ ಸಮಸ್ಯೆ. ಏಕೆಂದರೆ ನೀವು ಮಹಿಳೆಯರನ್ನು ಕುಗ್ಗಿಸಿದರೆ, ಇಡೀ ಸಮಾಜವೇ ಕೆಳಗುರುಳುತ್ತದೆ. ವರದಕ್ಷಿಣೆಗಾಗಿ ಬೇಡಿಕೆ ಇಡುವುದುಮಹಿಳೆಯರು ಮತ್ತು ಮನುಕುಲದ ಘನತೆಗೆ ತಕ್ಕುದಲ್ಲʼ ಎಂದು ರಾಜ್ಯಪಾಲ ಅಭಿಪ್ರಾಯಪಟ್ಟಿದ್ದಾರೆ.

ವರದಕ್ಷಿಣೆ ಪದ್ಧತಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಉದ್ದೇಶದಿಂದಖಾನ್ ಅವರುತಿರುವನಂತಪುರಂನಲ್ಲಿರುವ ರಾಜಭವನದ ತಮ್ಮ ಅಧಿಕೃತ ನಿವಾಸದಲ್ಲಿ ಬುಧವಾರ ಒಂದು ದಿನ ಉಪವಾಸ ನಡೆಸಿದ್ದರು.

‌‌‌ಗಾಂಧಿ ಸ್ಮಾರಕ ನಿಧಿ ಮತ್ತಿತರ ಸಂಘಟನೆಗಳ ಸಹಯೋಗದವರು ಕರೆ ನೀಡಿದ್ದ ವರದಕ್ಷಿಣೆ ಪದ್ಧತಿ ವಿರುದ್ಧದ ಸಾಮಾಜಿಕ ಜಾಗೃತಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಅವರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.