ADVERTISEMENT

ಕೇಜ್ರಿವಾಲ್ ವಿರುದ್ಧ ಸಿಬಿಐ ತನಿಖೆ ನಡೆಸಿ: ಸುಕೇಶ್ ಚಂದ್ರಶೇಖರ್ ಪತ್ರ

ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದ ಸುಕೇಶ್

ಪಿಟಿಐ
Published 9 ನವೆಂಬರ್ 2022, 2:37 IST
Last Updated 9 ನವೆಂಬರ್ 2022, 2:37 IST
   

ನವದೆಹಲಿ: ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಲೆಫ್ಟಿನೆಂಟ್ ಗರ್ವನರ್‌ಗೆ ಪತ್ರ ಬರೆದಿದ್ದಾರೆ.

ಈ ಕುರಿತು ಸುಕೇಶ್ ಚಂದ್ರಶೇಖರ್ ಪರ ವಕೀಲರು ಮಾಹಿತಿ ನೀಡಿದ್ದು, ವಂಚನೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿ ತನಿಖೆ ನಡೆಸಲು ಸುಕೇಶ್ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮೊದಲು ಲೆಫ್ಟಿನೆಂಟ್ ಗವರ್ನರ್‌ ಅವರಿಗೆ ಬರೆದಿದ್ದ ಪತ್ರ ಮಾಧ್ಯಮಗಳಲ್ಲಿ ಸೋರಿಕೆಯಾದ ಬಳಿಕ ದೆಹಲಿಯ ಮಾಂಡೊಲಿ ಜೈಲಿನಲ್ಲಿರುವ ತಮಗೆ ಬಹಳಷ್ಟು ಬೆದರಿಕೆ ಬಂದಿದೆ. ಎಎಪಿ ನಾಯಕ ಸತ್ಯೇಂದರ್ ಜೈನ್ ಅವರು ಜೈಲು ಅಧಿಕಾರಿಗಳ ಮೂಲಕ ಬೆದರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಜೈಲಿನಲ್ಲಿ ಭದ್ರತೆ ಮತ್ತು ಸೌಲಭ್ಯ ಒದಗಿಸಲು ಸತ್ಯೇಂದರ್ ಜೈನ್ ಅವರಿಗೆ ₹10 ಕೋಟಿ ನೀಡಲಾಗಿತ್ತು. ಅದಾದ ಬಳಿಕ 2016ರಲ್ಲಿ ಜೈನ್ ಅವರ ಫಾರ್ಮ್‌ಹೌಸ್‌ನಲ್ಲಿ ₹50 ಕೋಟಿ ನೀಡಿದ್ದೇನೆ, ನಂತರ ಹಯಾತ್ ಹೋಟೆಲ್‌ನಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದೆ ಎಂದು ಸುಕೇಶ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.