ADVERTISEMENT

ನೂತನ ಸಿಇಸಿ ಸುನಿಲ್‌ ಅರೋರಾ

ಪಿಟಿಐ
Published 26 ನವೆಂಬರ್ 2018, 19:50 IST
Last Updated 26 ನವೆಂಬರ್ 2018, 19:50 IST
ಸುನಿಲ್‌ ಅರೋರಾ
ಸುನಿಲ್‌ ಅರೋರಾ   

ನವದೆಹಲಿ: ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಸುನಿಲ್‌ ಅರೋರಾ ನೇಮಕಗೊಂಡಿದ್ದು ಡಿ. 2ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾನೂನು ಸಚಿವಾಲಯದ ಉನ್ನತ ಮೂಲಗಳು ಹೇಳಿವೆ.

ಈಗಿನ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಅವರು ಶನಿವಾರ ನಿವೃತ್ತರಾಗಲಿದ್ದಾರೆ. ಸುನಿಲ್‌ ಅವರ ನೇಮಕ ಕುರಿತು ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ. 2019ರ ಸಾರ್ವತ್ರಿಕ ಚುನಾವಣೆ ಅವರ ನೇತೃತ್ವದಲ್ಲೇ ನಡೆಯಲಿದೆ.

ಸುನಿಲ್‌ ನೇಮಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಹೆಸರನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ADVERTISEMENT

ಸುನಿಲ್‌ ಅವರು 2017ರ ಆ. 21ರಂದು ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.