ADVERTISEMENT

ಆಧಾರ್‌–ಮತದಾರರ ಗುರುತಿನ ಚೀಟಿ ಜೋಡಣೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 6:47 IST
Last Updated 8 ಮಾರ್ಚ್ 2019, 6:47 IST
   

ನವದೆಹಲಿ:ಆಧಾರ್‌ ಕಾರ್ಡ್‌ನೊಂದಿಗೆ ಮತದಾರರ ಗುರುತಿನ ಚೀಟಿಯ ಜೋಡಣೆ ಮಾಡುವ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀ ಕೋರ್ಟ್‌ ನಿರಾಕರಿಸಿದೆ.

ಆಧಾರ್‌–ಗುರುತಿನ ಚೀಟಿ ಜೋಡಣೆಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.

ಈ ಸಂಬಂಧ ಚುನಾವಣಾ ಆಯೋಗಕ್ಕೆ ಮನವಿ ಮಾಡಿ. ಅದು ಮನವಿಗೆ ಸೂಕ್ತ ಕ್ರಮದ ಆದೇಶವನ್ನು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ನೇತೃತ್ವದ ಪೀಠ ವಕೀಲ ಅಶ್ವಿನಿ ಉಪಾಧ್ಯಾಯ ಅವರಿಗೆ ಸೂಚಿಸಿದೆ.

ADVERTISEMENT

ಆಧಾರ್ ಆರಂಭವಾದಗಿನಿಂದಲೂ ವಿವಾದದ ಕೇಂದ್ರವಾಗಿತ್ತು.ವಿವಿಧ ಸಮಾಜ ಕಲ್ಯಾಣ ಯೋಜನೆಗಳಿಗೆಆಧಾರ್‌ ಸಂಖ್ಯೆ ಜೋಡಿಸುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇದಾದ ಬಳಿಕವರೂ ಆಧಾರ–ಮತದಾರರ ಗುರುತಿನ ಚೀಟಿ ಜೋಡಿಸುವ ಸಂಬಂಧ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವಹಲವು ಅರ್ಜಿಗಳು ನ್ಯಾಯಾಲಯದ ಮುಂದಿವೆ.

ಆಧಾರ್ ಕುರಿತಂತೆಓದಲೇ ಬೇಕಾದ ಈ 14ಸುದ್ದಿಗಳು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.