ADVERTISEMENT

ಶಾಲಾ ಸಮಾರಂಭಕ್ಕೆ ವಿಲಾಸಿ ಕಾರುಗಳಲ್ಲಿ ಬಂದ ವಿದ್ಯಾರ್ಥಿಗಳ ಪೋಷಕರ ವಿರುದ್ಧ ಕ್ರಮ

ಪಿಟಿಐ
Published 13 ಫೆಬ್ರುವರಿ 2025, 13:42 IST
Last Updated 13 ಫೆಬ್ರುವರಿ 2025, 13:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೂರತ್‌: ಕಾಲೇಜಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭಕ್ಕಾಗಿ 12ನೇ ತರಗತಿಯ ಕೆಲವು ವಿದ್ಯಾರ್ಥಿಗಳು, ಸುಮಾರು 35 ವಿಲಾಸಿ ಕಾರುಗಳ ಬೆಂಗಾವಲಿನಲ್ಲಿ ಆಗಮಿಸಿದ್ದು, ಈ ಕುರಿತ ವಿಡಿಯೊ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದೆ.

ವಿಲಾಸಿ ಕಾರುಗಳಲ್ಲಿ ಬಿಎಂಡಬ್ಲ್ಯೂ, ಮಸರಾಟಿ, ಮರ್ಸಿಡಿಸ್, ಪೋಶೆ ಇದ್ದವು. ಕೆಲವು ಕಾರುಗಳನ್ನು ವಿದ್ಯಾರ್ಥಿಗಳೇ ಚಾಲನೆ ಮಾಡಿದ್ದಾರೆ. ಬರುವ ಹಾದಿಯಲ್ಲಿ ಕೆಲವು ವಿದ್ಯಾರ್ಥಿಗಳು ಕಾರಿನ ಬಾಗಿಲು ತೆಗೆದು ದೇಹವನ್ನು ಹೊರಚಾಚಿದ್ದರು. ಸನ್‌ರೂಫ್‌ನಿಂದ ತಲೆ ಹೊರಗೆ ಹಾಕಿ ಕೇಕೆ ಹಾಕಿದ್ದರು. ಕೆಲವರು ಸ್ಮೋಕ್‌ ಗನ್‌ ಹಿಡಿದಿದ್ದರು. ಇವೆಲ್ಲ ದೃಶ್ಯಗಳೂ ವಿಡಿಯೊದಲ್ಲಿವೆ. 

ಗುಜರಾತ್‌ ರಾಜ್ಯದ ಸೂರತ್‌ನ ಒಲ್ಪಾಡ್‌ ವಲಯದಲ್ಲಿರುವ ಫೌಂಟೇನ್‌ ಹೆಡ್‌ ಸ್ಕೂಲ್‌ನ ವಿದ್ಯಾರ್ಥಿಗಳ ಈ ‘ಸ್ವೇಚ್ಛಾಚಾರ’ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾದಂತೆ, ಈ ಮಕ್ಕಳ ತಂದೆ–ತಾಯಿಗಳ ವಿರುದ್ಧ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

ಪೊಲೀಸರು ಸ್ವಪ್ರೇರಿತವಾಗಿ ಕ್ರಮಕ್ಕೆ ಮುಂದಾಗಿದ್ದು, ಮೂವರು ವಿದ್ಯಾರ್ಥಿಗಳು, ತಂದೆ–ತಾಯಿ ಸೇರಿ ಒಟ್ಟು 6 ಎಫ್‌ಐಆರ್‌ ದಾಖಲಿಸಿದ್ದಾರೆ. 22 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

‘ಚಾಲನಾ ಪರವಾನಗಿ ಇರುವವರೂ ಶಾಲೆಗೆ ಕಾರನ್ನು ಚಾಲನೆ ಮಾಡಿಕೊಂಡು ಬರಕೂಡದೆಂದು ಸೂಚಿಸಲಾಗಿತ್ತು’ ಎಂದು ಶಾಲೆಯ ಆಡಳಿತವು ಸ್ಪಷ್ಟನೆ ನೀಡಿದೆ.

‘ಸ್ಟಂಟ್‌ ಪ್ರದರ್ಶಿಸಲು ಬಳಸಿದ್ದ ಕಾರುಗಳ ಚಾಲಕರ ವಿರುದ್ಧ ವೇಗ, ನಿರ್ಲಕ್ಷ್ಯದಿಂದ ವಾಹನ ಚಾಲನೆ ಆರೋಪದಡಿ ಮೊಕದ್ದಮೆ ದಾಖಲಿಸಲಾಗಿದೆ’ ಎಂದು ಡಿಸಿಪಿ ಆರ್.ಪಿ.ಬರೋತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.