ಮುಂಬೈ: ದಿಶಾ ಸಾಲಿಯನ್ ಸಾಯುವ ಮುನ್ನ ಮುಂಬೈ ಪೊಲೀಸರ‘100’ ಸಂಖ್ಯೆಗೆ ಕರೆ ಮಾಡಿದ್ದರು ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ತಿಳಿಸಿದ್ದಾರೆ.
ದಿಶಾ ಅವರುನಟ ಸುಶಾಂತ್ ಸಿಂಗ್ ರಜಪೂತ್ ಸೇರಿದ್ದಂತೆ ಸಿನಿಮಾ ನಟ–ನಟಿಯರಿಗೆ ಸೆಲೆಬ್ರಿಟಿ ಟ್ಯಾಲೆಂಟ್ ಮ್ಯಾನೇಜರ್ ಆಗಿದ್ದರು.
‘ಮುಂಬೈ ಪೊಲೀಸರು ಪ್ರಕರಣದ ತನಿಖೆಯನ್ನು ಸಮರ್ಥವಾಗಿ ನಡೆಸಿಲ್ಲ. ದಿಶಾ ಅವರು ಪಾರ್ಟಿ ಮುಗಿಸಿಕೊಂಡು ಹೋಗುವಸಂದರ್ಭದಲ್ಲಿ ಪೊಲೀಸರಿಗೆ ಮತ್ತು ಗೆಳೆಯ ರೋಹನ್ ರೈಗೆ ಕರೆ ಮಾಡಿದ್ದರು’ ಎಂದು ಶಾಸಕರು ಹೇಳಿದ್ದಾರೆ.
‘ಜುಹುವಿನಲ್ಲಿ ನಡೆದ ಪಾರ್ಟಿಯಲ್ಲಿ ತನಗಾದ ಸಮಸ್ಯೆಯ ಕುರಿತು ದಿಶಾ ಪೊಲೀಸರಿಗೆ ವಿವರಿಸಿದ್ದರು.ಇದೇ ವೇಳೆ ನಟ ಸುಶಾಂತ್‌ಗೂ ಕರೆ ಮಾಡಿ ಘಟನೆ ಬಗ್ಗೆ ಹೇಳಿದ್ದಾರೆ. ಸುಶಾಂತ್ ಈ ವಿಷಯವನ್ನು ರಿಯಾ ಬಳಿ ತಿಳಿಸಿದ್ದಾರೆ. ರಿಯಾ ಮಲಾದ್‌ನಲ್ಲಿದ್ದವರಿಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ. ದಿಶಾ ಮತ್ತು ಸುಶಾಂತ್ ಎರಡೂ ಸಾವಿನ ನಡುವೆ ಸಂಬಂಧವಿರುವ ಸಾಧ್ಯತೆ ಇದೆ’ ಎಂದು ಅವರು ದೂರಿದ್ದಾರೆ.
100ಕ್ಕೆ ಬರುವ ಪ್ರತಿ ಕರೆಯ ರೆಕಾರ್ಡ್ ಮಾಡಲಾಗುತ್ತದೆ. ಈ ಸಂಬಂಧ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಜೂನ್ 8ರಂದು ಮುಂಬೈನ ಮಲಾದ್ ಉಪನಗರದ ಅಪಾರ್ಟ್‌ವೊಂದರ 12ನೇ ಮಹಡಿಯಿಂದ ಜಿಗಿದು ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.