ADVERTISEMENT

ಓಮಿಕ್ರಾನ್ ಆತಂಕ: ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಣೆ

ಐಎಎನ್ಎಸ್
Published 28 ನವೆಂಬರ್ 2021, 9:53 IST
Last Updated 28 ನವೆಂಬರ್ 2021, 9:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಕೊರೊನಾವೈರಸ್‌ನ ರೂಪಾಂತರ ಹಾಗೂ ಭಾರೀ ಅಪಾಯಕಾರಿ ಎಂದು ಗುರುತಿಸಲ್ಪಟ್ಟಿರುವ ಓಮಿಕ್ರಾನ್ ವೈರಸ್ ದಾಳಿ ಇಡುತ್ತಿರುವ ಮುನ್ಸೂಚನೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ನಿಟ್ಟಿನಲ್ಲಿ ತಮಿಳುನಾಡು ಆರೋಗ್ಯ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ಕಳುಹಿಸಿದ್ದು, ಓಮಿಕ್ರಾನ್ ವಿಷಯವಾಗಿ ಉನ್ನತ ಮಟ್ಟದ ನಿಗಾ ವಹಿಸುವುದು ತೀರಾ ಅವಶ್ಯಕ ಎಂದು ತಿಳಿಸಿದೆ.

ಅಲ್ಲದೇ ವಿಮಾನ ನಿಲ್ದಾಣಗಳಲ್ಲಿಹೆಚ್ಚು ತಪಾಸಣಾ ಘಟಕಗಳನ್ನು ತೆರೆಯಲು ಆದೇಶಿಸಲಾಗಿದ್ದು, ವಿದೇಶಗಳಿಂದ ತಮಿಳುನಾಡಿಗೆ ಬಂದವರನ್ನು ಟ್ಯ್ರಾಕ್ ಮಾಡಿ, ಅವರ ಆರೋಗ್ಯ ಪರೀಕ್ಷೆ ಮಾಡಲು ಸೂಚಿಸಲಾಗಿದೆ.

ADVERTISEMENT

‘ಈಗಾಗಲೇ ನಾವು ಓಮಿಕ್ರಾನ್ ವಿಷಯವಾಗಿ ಕೇಂದ್ರ ಸರ್ಕಾರದಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿದ್ದೇವೆ. ಆ ನಿಟ್ಟಿನಲ್ಲಿ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್ ಕೊಟ್ಟಿದ್ದು, ವಿದೇಶದಿಂದ ಬಂದವರನ್ನು ತಪಾಸಣೆ ಮಾಡಲು ಕೇಂದ್ರ ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ’ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಎಂಬ ರೂಪಾಂತರಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಇದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಓ) ಅತ್ಯಂತ ಅಪಾಯಕಾರಿ ಎಂದು ಗುರುತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.