ADVERTISEMENT

ಕಸದಲ್ಲಿ 100 ಗ್ರಾಂ ಚಿನ್ನದ ನಾಣ್ಯ ಪತ್ತೆ: ಮಾಲೀಕರಿಗೆ ಹಿಂತಿರುಗಿಸಿದ ಮಹಿಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2021, 8:25 IST
Last Updated 20 ಅಕ್ಟೋಬರ್ 2021, 8:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ತಮಿಳುನಾಡಿನಲ್ಲಿ ಪೌರ ಕಾರ್ಮಿಕ ಮಹಿಳೆಯೊಬ್ಬರು ತಾವು ಕೆಲಸ ಮಾಡುವ ಸಂದರ್ಭದಲ್ಲಿ ಕಸದ ತೊಟ್ಟಿಯಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ನಾಣ್ಯದ ಬೆಲೆ ₹7.5 ಲಕ್ಷ ಎಂದು ಹೇಳಲಾಗಿದೆ. ಪೌರ ಕಾರ್ಮಿಕ ಮಹಿಳೆ ಮೇರಿ ಅವರು ತಿರುವೊಟ್ಟಿಯುರ್​ ಬೀದಿಯಲ್ಲಿ ಕಸ ಬೇರ್ಪಡಿಸುತ್ತಿದ್ದ ಸಂದರ್ಭದಲ್ಲಿ ನಾಣ್ಯದ ಶಬ್ದ ಕೇಳಿಸಿತ್ತು. ಚೀಲದಲ್ಲಿ ಚಿನ್ನದ ನಾಣ್ಯ ಇರುವುದು ಪತ್ತೆಯಾಗಿತ್ತು. ಕೂಡಲೇ ಮೇರಿ ಅದನ್ನು ಸಮೀಪದ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದರು.

ಇದರ ನಡುವೆ ತಿರುವೊಟ್ಟಿಯುರ್​ನ ಗಣೇಶ್ ರಾಮನ್ ಅವರು ತಮ್ಮ ಮನೆಯಲ್ಲಿ 100 ಗ್ರಾಂ ಚಿನ್ನದ ನಾಣ್ಯ ನಾಪತ್ತೆಯಾಗಿದೆ ಎಂದು ಪೋಲಿಸರಿಗೆ ದೂರು ನೀಡಿದ್ದರು. ಚಿನ್ನದ ನಾಣ್ಯವನ್ನು ಚಿಕ್ಕ ಚೀಲದಲ್ಲಿ ಸುತ್ತಿ ತನ್ನ ಹಾಸಿಗೆಯ ಕೆಳಗೆ ಇಟ್ಟುಕೊಂಡಿದ್ದೆ. ಈ ಮಾಹಿತಿ ಅರಿಯದ ನನ್ನ ಪತ್ನಿ ಆ ಚೀಲವನ್ನು ಕಸದ ಬುಟ್ಟಿಗೆ ಎಸೆದಿರುವುದಾಗಿ ಪೊಲೀಸರ ಬಳಿ ಹೇಳಿದ್ದರು.

ADVERTISEMENT

ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಜತೆಗೆ, ಮೇರಿ ಹಾಗೂ ಮನೆ ಮಾಲೀಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇದೇ ವೇಳೆ ಮಾಲೀಕರಿಗೆ ನಾಣ್ಯವನ್ನು ಹಿಂತಿರುಗಿಸಿದ್ದಾರೆ. ಜತೆಗೆ, ಮೇರಿಯವರ ಪ್ರಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.