ADVERTISEMENT

ಜಿ20 ಶೃಂಗಸಭೆ ಸಿದ್ಧತಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ತಮಿಳುನಾಡು ಸಿಎಂ ಸ್ಟಾಲಿನ್

ಐಎಎನ್ಎಸ್
Published 28 ನವೆಂಬರ್ 2022, 5:28 IST
Last Updated 28 ನವೆಂಬರ್ 2022, 5:28 IST
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌   

ಕೋಲ್ಕತ್ತ: ಭಾರತದಲ್ಲಿ ನಡೆಯುವ 2023ರ ಜಿ20 ಶೃಂಗಸಭೆಯ ಪೂರ್ವ ಸಿದ್ಧತಾ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಭಾಗವಹಿಸಲಿದ್ದಾರೆ.ಈ ಸಭೆಯುಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಡಿಸೆಂಬರ್‌ 5ರಂದು ನಡೆಯಲಿದ್ದು, ಸ್ಟಾಲಿನ್‌ ಡಿಸೆಂಬರ್‌ 4ರಂದು ದೆಹಲಿಗೆ ತೆರಳಲಿದ್ದಾರೆ.

2023ರ ಜಿ20 ಸಮ್ಮೇಳನದ ಆತಿಥ್ಯವನ್ನು ಭಾರತ ವಹಿಸಿಕೊಳ್ಳಲಿದೆ.

ಪ್ರಧಾನಿ ಮೋದಿ ಅವರು ಕರೆದಿರುವಪೂರ್ವಸಿದ್ಧತಾ ಸಭೆಯನ್ನುಬಿಜೆಪಿಯೇತರ ಪಕ್ಷಗಳ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಬಹಿಷ್ಕರಿಸಲಿದ್ದಾರೆ ಎಂದು ಕೆಲವು ವರದಿಗಳು ಪ್ರಕಟವಾಗಿವೆ.

ADVERTISEMENT

ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸುವುದಾಗಿಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಖಚಿತಪಡಿಸಿದ್ದಾರೆ. ತಾವುತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ಅಧ್ಯಕ್ಷರಾಗಿಸಭೆಗೆ ಭಾಗವಹಿಸುತ್ತೇನೆಯೇ ಹೊರತು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.