ADVERTISEMENT

ಬಹಳ ಹಿಂದೆಯೇ ತಮಿಳರಿಗೆ ಕಬ್ಬಿಣ ತಂತ್ರಜ್ಞಾನ ತಿಳಿದಿತ್ತು: ಎಂ.ಕೆ.ಸ್ಟಾಲಿನ್‌

​ಪ್ರಜಾವಾಣಿ ವಾರ್ತೆ
Published 10 ಮೇ 2022, 1:54 IST
Last Updated 10 ಮೇ 2022, 1:54 IST
ಎಂ. ಕೆ ಸ್ಟಾಲಿನ್‌
ಎಂ. ಕೆ ಸ್ಟಾಲಿನ್‌    

ಚೆನ್ನೈ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮೈಲಾದುಂಪರೈನಲ್ಲಿ ನಡೆದ ಉತ್ಖನನದ ವೇಳೆ ದೊರೆತ ವಸ್ತುಗಳ ಕಾರ್ಬನ್‌ ಡೇಟಿಂಗ್‌ ಪ್ರಕಾರ ತಮಿಳರಿಗೆ ಸುಮಾರು 4,200 ವರ್ಷಗಳ ಹಿಂದೆಯೇ, ಅಂದರೆ ಕ್ರಿ.ಪೂ 2172ರಲ್ಲಿಯೇ ಕಬ್ಬಿಣ ತಂತ್ರಜ್ಞಾನದ ಪರಿಚಯವಿತ್ತು ಎಂಬುದು ತಿಳಿದು ಬಂದಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಈ ಕುರಿತ ಮಾಹಿತಿಯನ್ನು ವಿಧಾನಸಭೆಗೆ ನೀಡಿದರು. 2020–21ರಲ್ಲಿ ನಡೆದ ಮೊದಲ ಹಂತದ ಉತ್ಖನನವು ಕ್ರಿ.ಪೂ 1615 ಮತ್ತು ಕ್ರಿ.ಪೂ 2172 ಕಾಲಮಾನದ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದರು.

ತಮಿಳುನಾಡಿನ ಕೀಲಾಡಿಯಲ್ಲಿನ ಕಲಾಕೃತಿಗಳ ಕಾರ್ಬನ್‌ ಡೇಟಿಂಗ್‌, ಮದುರೈ ಬಳಿಯಸಂಗಂ ಯುಗಕ್ಕೆ ಸಂಬಂಧಿಸಿದ ನಿಕ್ಷೇಪದಲ್ಲಿನ ಉತ್ಖನನ, ತೂತುಕುಡಿ ಜಿಲ್ಲೆಯ ಶಿವಕಲೈನಲ್ಲಿನ ಸಮಾಧಿಯಲ್ಲಿ ಕಂಡು ಬಂದಿರುವ ಭತ್ತದ ಹೊಟ್ಟುಗಳ ಸಂಶೋಧನೆಯು ಅವುಗಳ ಕಾಲಮಾನವನ್ನು ಕ್ರಿ.ಪೂ 2,600 ಮತ್ತು 3,200ಕ್ಕೆ ತೆಗೆದುಕೊಂಡು ಹೋಗಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.