ADVERTISEMENT

Air India Plane Crash: ಟಾಟಾ ಸಮೂಹದಿಂದ ₹1 ಕೋಟಿ ಪರಿಹಾರ

ಪಿಟಿಐ
Published 12 ಜೂನ್ 2025, 16:10 IST
Last Updated 12 ಜೂನ್ 2025, 16:10 IST
<div class="paragraphs"><p>ಎನ್. ಚಂದ್ರಶೇಖರನ್</p></div>

ಎನ್. ಚಂದ್ರಶೇಖರನ್

   

–ಪಿಟಿಐ ಚಿತ್ರ

ನವದೆಹಲಿ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬಕ್ಕೆ ಟಾಟಾ ಸಮೂಹವು ₹1 ಕೋಟಿ ಪರಿಹಾರ ನೀಡಲಿದೆ.

ADVERTISEMENT

‘ಈ ಹೊತ್ತಿನಲ್ಲಿ ನಮಗೆ ಆಗಿರುವ ಶೋಕವನ್ನು ಸರಿಯಾಗಿ ವಿವರಿಸಲು ಯಾವ ಪದವೂ ಸಿಗುತ್ತಿಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ಕ್ಷೇಮಕ್ಕಾಗಿ, ಗಾಯಗೊಂಡವರ ಕ್ಷೇಮಕ್ಕಾಗಿ ನಾವು ಪ್ರಾರ್ಥಿಸುತ್ತೇವೆ’ ಎಂದು ಟಾಟಾ ಸಮೂಹ ಹಾಗೂ ಏರ್‌ ಇಂಡಿಯಾ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.

ದುರಂತದಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚಗಳನ್ನು ಕೂಡ ಟಾಟಾ ಸಮೂಹವು ಭರಿಸಲಿದೆ, ಅವರು ಎಲ್ಲ ಅಗತ್ಯ ನೆರವು ಪಡೆಯುವುದನ್ನು ಖಾತರಿಪಡಿಸಲಿದೆ ಎಂದು ಅವರು ಹೇಳಿದ್ದಾರೆ.

ಬಿ.ಜೆ. ಮೆಡಿಕಲ್ಸ್‌ನ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ ನೆರವು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.