ADVERTISEMENT

ಕೇವಲ 400 ಮೀಟರ್‌ ‍ಟ್ಸಾಕಿ ಪ್ರಯಾಣಕ್ಕೆ ಬರೋಬ್ಬರಿ ₹18,000 ಶುಲ್ಕ ವಿಧಿಸಿದ ಚಾಲಕ

ಪಿಟಿಐ
Published 31 ಜನವರಿ 2026, 7:30 IST
Last Updated 31 ಜನವರಿ 2026, 7:30 IST
   

ಮುಂಬೈ: ಅರ್ಜೆಂಟೀನಾ ಅರಿಯಾನೊ ಎಂಬುವವರು ಇತ್ತೀಚೆಗೆ ಮುಂಬೈನಲ್ಲಿ ತಮಗೆ ಆದ ಅನುಭವದ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

ಟಾಕ್ಸಿ ಚಾಲಕ ತಮ್ಮನ್ನು ನಗರದ ವಿವಿಧೆಡೆ ಸುತ್ತಾಡಿಸಿ, ನಂತರ ಹೋಟೆಲ್‌ ಬಳಿ ಬಿಟ್ಟಿದ್ದ. ಅದಕ್ಕಾಗಿ, ಬರೋಬ್ಬರಿ ₹18,000 ವಸೂಲಿ ಮಾಡಿದ ಎಂದು ಬೇಸರ ವ್ಯಕ್ತಪಡಿಸಿದ್ದರು. ಕಾರಿನ ಮಾಹಿತಿಯನ್ನೂ ಚಿತ್ರಸಹಿತ ಹಂಚಿಕೊಂಡಿದ್ದರು.

ಇದ‌ನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕೇವಲ ಮೂರೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ADVERTISEMENT

'ಮಹಿಳೆಯನ್ನು ಪೂರ್ವ ಅಂಧೇರಿಯ ಸುತ್ತಲೂ 20 ನಿಮಿಷಗಳ ಕಾಲ ಟ್ಯಾಕ್ಸಿಯಲ್ಲಿ ಸುತ್ತಾಡಿಸಿ, ಬಳಿಕ ಹೋಟೆಲ್‌ ಬಳಿ ಇಳಿಸಿದ್ದಾಗಿ ತನಿಖೆಯ ವೇಳೆ ಚಾಲಕ ಒಪ್ಪಿಕೊಂಡಿದ್ದಾನೆ' ಎಂದು ಪೊಲೀಸರು ಹೇಳಿದ್ದಾರೆ.

ಯಾದವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ಪರವಾನಗಿಯನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.