ADVERTISEMENT

ಜೀವ ಬೆದರಿಕೆ: ರೇಣು ಯಾದವ್ ವಿರುದ್ಧ ತೇಜ್‌ಪ್ರತಾಪ್ ದೂರು

ಪಿಟಿಐ
Published 27 ಡಿಸೆಂಬರ್ 2025, 14:28 IST
Last Updated 27 ಡಿಸೆಂಬರ್ 2025, 14:28 IST
ತೇಜ್‌ ಪ್ರತಾಪ್
ತೇಜ್‌ ಪ್ರತಾಪ್   

ಪಟ್ನಾ: ಪಕ್ಷದಿಂದ ಉಚ್ಚಾಟಿತರಾಗಿರುವ ಸಂತೋಷ್ ರೇಣು ಯಾದವ್‌ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜನಶಕ್ತಿ ಜನತಾ ದಳದ (ಜೆಜೆಡಿ) ಮುಖ್ಯಸ್ಥ ತೇಜ್‌ಪ್ರತಾಪ್‌ ಯಾದವ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಅವರ ಹಿರಿಯ ಪುತ್ರ, ಬಿಹಾರದ ಮಾಜಿ ಸಚಿವ ತೇಜ್‌ ಪ್ರತಾಪ್ ಅವರು ತಮಗೆ ರಕ್ಷಣೆ ನೀಡುವಂತೆ ಉಪಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಅವರಿಗೆ ಪತ್ರ ಬರೆದಿದ್ದಾರೆ. ‘ನನಗೆ ಪತ್ರ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸಾಮ್ರಾಟ್‌ ಚೌಧರಿ ತಿಳಿಸಿದ್ದಾರೆ.

‘ತೇಜ್‌ಪ್ರತಾಪ್ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ರೇಣು ಅವರನ್ನು ಜೆಜೆಡಿಯ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿತ್ತು. ಆದರೆ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದ ಡಿಸೆಂಬರ್ 14ರಂದು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಸಾಮಾಜಿಕ ಜಾಲತಾಣದ ಮೂಲಕ ನನ್ನನ್ನು ನಿಂದಿಸಲು ಮತ್ತು ಜೀವ ಬೆದರಿಕೆ ಹಾಕಲು ಆರಂಭಿಸಿದ್ದರು’ ಎಂದು ತೇಜ್‌ಪ್ರತಾಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.