ತೇಜಸ್ವಿ ಯಾದವ್
– ಪಿಟಿಐ ಚಿತ್ರ
ಪಟ್ನಾ: ತೀರಾ ಹಿಂದುಳಿದ ವರ್ಗಕ್ಕೆ (ಇಬಿಸಿ) ಸೇರಿದ ನಾಯಕನನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ ಬಿಜೆಪಿ ಗಾಬರಿಗೊಳಗಾಗಿದೆ ಎಂದು ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹೇಳಿದ್ದಾರೆ.
ವಿಕಾಶಶೀಲ ಇನ್ಸಾನ್ ಪಾರ್ಟಿಯ (ವಿಐಪಿ) ಸಂಸ್ಥಾಪಕ ಮುಕೇಶ್ ಸಹಾನಿಯವರನ್ನು ಇಂಡಿಯಾ ಬಣ ತನ್ನ ಉಪಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
‘ಇಬಿಸಿ ಸಮುದಾಯ ವಿರುದ್ಧ ಬಿಜೆಪಿಯ ದ್ವೇಷ ಈಗ ಬಹಿರಂಗವಾಗಿದೆ. ಮುಕೇಶ್ ಸಹಾನಿಯವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದನ್ನು ಅವರು ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ. ಇಬಿಸಿ ನಾಯಕನನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದರಿಂದ ಅಮಿತ್ ಶಾ ಹತಾಶರಾಗಿದ್ದು ಯಾಕೆ’ ಎಂದು ಅವರು ಪ್ರಶ್ನಿಸಿದ್ದಾರೆ.
ಪಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಅಲ್ಪಸಂಖ್ಯಾತರನ್ನು ನುಸುಳುಕೋರರು ಎಂದು ಕರೆಯುವ ಶಾ ಸೇರಿದಂತೆ ಬಿಜೆಪಿ ನಾಯಕರು, ಈಗ ಮುಸ್ಲಿಂ ನಾಯಕನನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇಂಡಿಯಾ ಬಣ ಏಕೆ ಹೆಸರಿಸಲಿಲ್ಲ ಎಂದು ಕೇಳುತ್ತಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಪದೇ ಪದೇ ನಿಂದಿಸುವ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿರುವ ಬಿಜೆಪಿ, ಈಗ ಅವರ ಪ್ರಾತಿನಿಧ್ಯದ ಬಗ್ಗೆ ಮಾತನಾಡುತ್ತಿವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ಗೆ ಮಾಡಿದ್ದರಲ್ಲಿ ಶೇ 1 ರಷ್ಟೂ ಕೂಡ ಬಿಹಾರಕ್ಕೆ ಮಾಡಿಲ್ಲ. ಬಿಹಾರದ ಜನರು ಮೂರ್ಖರಲ್ಲ. ಅವರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.