ADVERTISEMENT

ಎಸಿಬಿ ದಾಳಿ: ₹ 93.5 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 17:56 IST
Last Updated 11 ಜುಲೈ 2019, 17:56 IST
ವಶಪಡಿಸಿಕೊಂಡ ಹಣದೊಂದಿಗೆ ಎಸಿಬಿ ಸಿಬ್ಬಂದಿ
ವಶಪಡಿಸಿಕೊಂಡ ಹಣದೊಂದಿಗೆ ಎಸಿಬಿ ಸಿಬ್ಬಂದಿ   

ಹೈದರಾಬಾದ್‌: ದಿಢೀರ್‌ ದಾಳಿ ನಡೆಸಿದ ತೆಲಂಗಾಣಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಿಬ್ಬಂದಿ, ತಹಶೀಲ್ದಾರ್‌ರಿಂದ ₹ 93.5 ಲಕ್ಷ ನಗದು ಹಾಗೂ 400 ಗ್ರಾಂ. ಚಿನ್ನ ವಶಪಡಿಸಿಕೊಂಡಿದ್ದಾರೆ.

ರಂಗಾರೆಡ್ಡಿಯ ಜಿಲ್ಲೆಯ ಕೇಶಂಪೇಟ್‌ ತಹಶೀಲ್ದಾರ್‌ ವಿ.ಲಾವಣ್ಯ ಅವರ ಮನೆ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದುವರೆಗೂ ಎಸಿಬಿ ಅಧಿಕಾರಿಗಳು ವಶಪಡಸಿಕೊಂಡ ಹಣದಲ್ಲಿಯೇ ಇದು ಭಾರಿ ಮೊತ್ತವಾಗಿದೆ.

ಬುಧವಾರ ಗ್ರಾಮ ಕಂದಾಯ ಅಧಿಕಾರಿ (ವಿಆರ್‌ಒ) ಅನಂತಯ್ಯ ಎಂಬುವವರುಲಂಚ ಪಡೆಯುತ್ತಿದ್ದಾಗ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಇಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಹಯಾತ್‌ನಗರದಲ್ಲಿನತಹಶೀಲ್ದಾರ್ ಮನೆಯಲ್ಲಿ ಹುಡುಕಾಟ ನಡೆಸಿದಾ‌ಗ ಹಣ ಸಿಕ್ಕಿದೆ. ಆರೋಪಿ ಲಾವಣ್ಯ ಹಣದ ಮೂಲದ ಕುರಿತು ಸ್ಪಷ್ಟ ಮಾಹಿತಿ ನೀಡಲಿಲ್ಲ. ವಿಆರ್‌ಒ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.