ಪ್ರಾತಿನಿಧಿಕ ಚಿತ್ರ
ಹೈದರಾಬಾದ್: ‘ರಾತ್ರಿ 11 ಗಂಟೆಯ ನಂತರ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆಗೆ ಅನುಮತಿ ನೀಡಬಾರದು’ ಎಂದು ತೆಲಂಗಾಣ ಸರ್ಕಾರಕ್ಕೆ ತೆಲಂಗಾಣ ಹೈಕೋರ್ಟ್ ನಿರ್ದೇಶನ ನೀಡಿದೆ.
ನಟ ರಾಮ್‌ಚರಣ್ ಅವರು ನಟಿಸಿರುವ ‘ಗೇಮ್ ಚೇಂಜರ್’ ಚಿತ್ರದ ಟಿಕೆಟ್‌ಗಳ ಬೆಲೆ ಏರಿಸಿರುವುದಕ್ಕೆ ಆಕ್ಷೇಪವೆತ್ತಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.
‘ಬೆಳಿಗ್ಗೆ 11ರ ಒಳಗೆ ಮತ್ತು ರಾತ್ರಿ 11ರ ನಂತರ 16 ವರ್ಷದೊಳಗಿನ ಮಕ್ಕಳು ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ವೀಕ್ಷಣೆ ಮಾಡದಂತೆ ಸೂಕ್ತ ನಿಯಮ ರೂಪಿಸಿ. ಈ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿ. ನೀವು ನಿಯಮ ರೂಪಿಸುವವರೆಗೂ ಈ ಆದೇಶ ಜಾರಿಯಲ್ಲಿರಲಿದೆ’ ಎಂದು ನ್ಯಾಯಾಲಯ ಹೇಳಿದೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ 2’ ಸಿನಿಮಾದ ವೀಕ್ಷಣೆ ಸಂದರ್ಭ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಮಗನಿಗೆ ಗಂಭೀರ ಗಾಯವಾಗಿದ್ದ ಘಟನೆ ಕಳೆದ ಡಿಸೆಂಬರ್‌ನಲ್ಲಿ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.