ADVERTISEMENT

ಮುಂಬೈ: ₹40 ಕೋಟಿ ಮೌಲ್ಯದ ಕೊಕೇನ್​ ಸಾಗಿಸುತ್ತಿದ್ದ ಥಾಯ್ ಮಹಿಳೆಯ ಬಂಧನ

ಅಂತರರಾಷ್ಟ್ರೀಯ ಮಾದಕ ವಸ್ತು ದಂಧೆ

ಪಿಟಿಐ
Published 12 ಜನವರಿ 2024, 7:25 IST
Last Updated 12 ಜನವರಿ 2024, 7:25 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮುಂಬೈ (ಮಹಾರಾಷ್ಟ್ರ): ಸುಮಾರು ₹40 ಕೋಟಿ ಮೌಲ್ಯದ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ಥಾಯ್ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಶುಕ್ರವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.

ADVERTISEMENT

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ, ಆಫ್ರಿಕಾದ ಅಡಿಸ್ ಅಬಾಬದಿಂದ ಆಗಮಿಸಿದ ಮಹಿಳೆಯನ್ನು ಬಂಧಿಸಿದೆ.

ಆಕೆಯನ್ನು ಪರೀಕ್ಷೆ ಮಾಡಿದಾಗ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಅವರ ಟ್ರಾಲಿ ಬ್ಯಾಗ್​ನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಬಿಳಿ ಪುಡಿಯಂತಹ ವಸ್ತುವನ್ನು ಹೊಂದಿರುವ ಅನೇಕ ಪ್ಯಾಕೆಟ್​ಗಳು ಪತ್ತೆಯಾಗಿವೆ. ನಂತರ ಅದನ್ನು ಪರೀಕ್ಷಿಸಿದಾಗ ಕೊಕೇನ್​ ಎಂದು ದೃಢಪಟ್ಟಿದೆ. ಅಂದಾಜು ₹40 ಕೋಟಿ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಹೊಂದಿದೆ ಎಂದು ಕಂದಾಯ ನಿರ್ದೇಶನಾಲಯ ತಿಳಿಸಿದೆ.

ಬಂಧಿತ ಮಹಿಳೆಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.