ADVERTISEMENT

ಉದ್ಯಮಿ ಮುಖೇಶ್ ಅಂಬಾನಿಗೆ ಜೀವ ಬೆದರಿಕೆ: ವ್ಯಕ್ತಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2022, 9:36 IST
Last Updated 15 ಆಗಸ್ಟ್ 2022, 9:36 IST
 ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ   

ಮುಂಬೈ: ಖ್ಯಾತ ಉದ್ಯಮಿಮುಖೇಶ್ ಅಂಬಾನಿ ಅವರ ಕುಟುಂಬಕ್ಕೆ ಜೀವ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಅಫ್ಜಲ್‌ ಎಂದು ಗುರುತಿಸಲಾಗಿದ್ದು, ಈ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥಎಂಬುದುಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಫ್ಜಲ್‌ನನ್ನು ಬಂಧಿಸಿರುವ ಪೊಲೀಸರುತನಿಖೆಗೆ ಒಳಪಡಿಸಿದ್ದಾರೆ.

ಮುಖೇಶ್ ಅಂಬಾನಿ ನಡೆಸುತ್ತಿರುವರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬಂಧಿತ ಆರೋಪಿ4 ನಾಲ್ಕು ಸಲ ಕರೆ ನೀಡಿ ಜೀವ ಬೆದರಿಕೆ ಹಾಕಿದ್ದ. ದೂರವಾಣಿ ಕರೆಗಳನ್ನು ಟ್ರ್ಯಾಕ್ ಮಾಡಿ ಅಫ್ಜಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

2021ರಲ್ಲಿ ಅಂಬಾನಿ ಮನೆಯ ಬಳಿ ಸ್ಫೋಟಕವಿರಿಸಿದ್ದಕಾರು ಪತ್ತೆಯಾಗಿತ್ತು. ಅದರಲ್ಲಿ 20 ಜಿಲೆಟಿನ್ ಕಡ್ಡಿಗಳು ಸಿಕ್ಕಿದ್ದವು. ಈ ಹಿನ್ನಲೆಯಲ್ಲಿ ಮುಖೇಶ್ ಅವರಿಗೆ ಜೆಡ್ ಪ್ಲಸ್ ಸೆಕ್ಯೂರಿಟಿಯನ್ನು ಸರ್ಕಾರ ಕಲ್ಪಿಸಿದೆ. ಅದಾಗ್ಯೂ, ಇದರ ಖರ್ಚನ್ನು ಅಂಬಾನಿ ಅವರೇ ನೀಡುತ್ತಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.