ADVERTISEMENT

ಲಂಕಾ ನೆರವಿಗೆ ನಿಂತ ತಮಿಳುನಾಡು: ಅಕ್ಕಿ, ಹಾಲಿನ ಪುಡಿ, ಔಷಧಿ ರವಾನಿಸಲು ತೀರ್ಮಾನ

ಐಎಎನ್ಎಸ್
Published 3 ಮೇ 2022, 10:48 IST
Last Updated 3 ಮೇ 2022, 10:48 IST
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌    

ಚೆನ್ನೈ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವ ಶ್ರೀಲಂಕಾದ ಜನರ ನೆರವಿಗೆ ತಮಿಳುನಾಡು ಸರ್ಕಾರ ಧಾವಿಸಿದೆ. ಅಕ್ಕಿ, ಹಾಲಿನ ಪುಡಿ ಮತ್ತು ಜೀವರಕ್ಷಕ ಔಷಧಿಯನ್ನು ಮೊದಲ ಹಂತದಲ್ಲಿ ದ್ವೀಪ ರಾಷ್ಟ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಮಂಗಳವಾರ ಹೇಳಿದ್ದಾರೆ.

ತಮಿಳುನಾಡು ಸರ್ಕಾರದ ಈ ಉದ್ದೇಶಕ್ಕೆ ನಾಗರಿಕರೂ ದೇಣಿಗೆ ನೀಡುವ ಮೂಲಕ ನೆರವಾಗಬಹುದು ಎಂದು ಸ್ಟಾಲಿನ್‌ ಹೇಳಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಿ ಶ್ರೀಲಂಕಾಕ್ಕೆ ತಲುಪಿಸುವುದಾಗಿ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ತಮಿಳುನಾಡು ಶೀಘ್ರದಲ್ಲಿಯೇ ಶ್ರೀಲಂಕಾಕ್ಕೆ 40,000 ಟನ್ ಅಕ್ಕಿ, 500 ಟನ್ ಹಾಲಿನ ಪುಡಿ ಮತ್ತು ಜೀವರಕ್ಷಕ ಔಷಧಿಯನ್ನು ಕಳುಹಿಸಲಿದೆ ಎಂದು ಸ್ಟಾಲಿನ್ ಹೇಳಿದರು.

ADVERTISEMENT

ಕೊಲಂಬೊದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ವಾಸಿಸುತ್ತಿರುವ ತಮಿಳರಿಗೆ ಆಹಾರ ಧಾನ್ಯ, ತರಕಾರಿ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ರವಾನಿಸಲು ರಾಜ್ಯಕ್ಕೆ ಅನುಮತಿ ನೀಡುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಇತ್ತೀಚೆಗೆ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.