ADVERTISEMENT

2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 3:23 IST
Last Updated 27 ಫೆಬ್ರುವರಿ 2026, 3:23 IST
<div class="paragraphs"><p>ಈ ದಿನದ ಪ್ರಮುಖ 10 ಸುದ್ದಿಗಳು</p></div>

ಈ ದಿನದ ಪ್ರಮುಖ 10 ಸುದ್ದಿಗಳು

   

ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಗಡಿ ಸಂಘರ್ಷ ತಾರಕಕ್ಕೆ: ಅಫ್ಗಾನಿಸ್ತಾನ ವಿರುದ್ಧ ಯುದ್ಧ ಘೋಷಿಸಿದ ಪಾಕಿಸ್ತಾನ

ತಾಲಿಬಾನ್‌ ಆಡಳಿತವಿರುವ ಅಫ್ಗಾನಿಸ್ತಾನ ವಿರುದ್ಧ 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್‌ ಶುಕ್ರವಾರ ಘೋಷಿಸಿದ್ದಾರೆ.

ADVERTISEMENT

ಅಜಿತ್ ಪವಾರ್ ಮಗನಿಗೆ ರಾಜ್ಯಸಭೆ ಟಿಕೆಟ್: ಪಾರ್ಥ ಪವಾರ್ ಬಗ್ಗೆ ಇಲ್ಲಿದೆ ಮಾಹಿತಿ

ವಿಮಾನ ದುರಂತದಲ್ಲಿ ಮೃತಪಟ್ಟ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ನಾಯಕ ಅಜಿತ್ ಪವಾರ್ ಮಗ ಪಾರ್ಥ ಪವಾರ್ ಅವರಿಗೆ ಎನ್‌ಸಿಪಿ ರಾಜ್ಯಸಭೆ ಟಿಕೆಟ್ ನೀಡಿದೆ.

ಭಾರತ–ಇಸ್ರೇಲ್‌: ವ್ಯಾಪಾರ, ಕೃಷಿ, ಡಿಜಿಟಲ್‌ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ

ಇಸ್ರೇಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಜತೆ ವಿವಿಧ ಮಹತ್ವದ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು. 

Karnataka Politics: ಉಪ ಸಭಾಪತಿ ಪ್ರಾಣೇಶ್‌ ಪದಚ್ಯುತಿಗೆ ಕಾರ್ಯತಂತ್ರ

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಅವರನ್ನು ಪದಚ್ಯುತಿಗೊಳಿಸಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ. 

56,432 ಹುದ್ದೆಗೆ ನೇಮಕ | 30 ದಿನದೊಳಗೆ ಪ್ರಕ್ರಿಯೆ: ಸಚಿವ ಸಂಪುಟ ಸಭೆ ನಿರ್ಣಯ

ಮುಂದಿನ 30 ದಿನದೊಳಗೆ ನೇರ ನೇಮಕಾತಿ ಪ್ರಕ್ರಿಯೆಯಡಿ 56,432 ಹುದ್ದೆಗಳನ್ನು ಭರ್ತಿ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ: 7.10 ಲಕ್ಷ ವಿದ್ಯಾರ್ಥಿಗಳು ನೋಂದಣಿ

ದ್ವಿತೀಯ ಪಿಯು ಪರೀಕ್ಷೆ ಫೆ.28ರಿಂದ ಆರಂಭ ಆಗಲಿದ್ದು, ಮೊದಲ ದಿನ ಕನ್ನಡ, ಅರೆಬಿಕ್‌ ಭಾಷಾ ಪರೀಕ್ಷೆಗಳು ನಡೆಯಲಿವೆ. 5,174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ವಿಜ್ಞಾನ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಬೊಜ್ಜು ಕರಗಿಸಲು ಪೊಲೀಸರಿಗೆ ಪಾಠ: ರಾಜ್ಯದ ಆರು ಕಡೆ ಚಿಕಿತ್ಸೆ, ತರಬೇತಿ

ಕೇಂದ್ರ ಸಶಸ್ತ್ರ ಪಡೆ ಹಾಗೂ ಪೊಲೀಸ್ ಸಿಬ್ಬಂದಿಯ ಬೊಜ್ಜಿನ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರವು ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದೆ. ಕೇಂದ್ರದ ಆಯುಷ್‌ ಸಚಿವಾಲಯದಡಿ ಕಾರ್ಯನಿರ್ವಹಿಸುವ, ನವದೆಹಲಿಯ ಕೇಂದ್ರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಂಶೋಧನಾ ಪರಿಷತ್ತು ಇದಕ್ಕಾಗಿ ವಿನೂತನ ಯೋಜನೆಯನ್ನು ರೂಪಿಸಿದೆ. ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗಳಲ್ಲಿ ಸಿಬ್ಬಂದಿಗೆ ತರಬೇತಿ ನೀಡುವುದರ ಜೊತೆಗೆ ಬೊಜ್ಜು ನಿವಾರಣೆಯ ಕುರಿತ ಸಂಶೋಧನೆಯನ್ನೂ ನಡೆಸುತ್ತಿದೆ.

‘ಆಶಾಕಿರಣ’ ಯೋಜನೆಯಡಿ ನೇತ್ರ ತಪಾಸಣೆ: 24.50 ಲಕ್ಷ ಜನರಲ್ಲಿ ದೃಷ್ಟಿದೋಷ ಪತ್ತೆ

ರಾಜ್ಯದಲ್ಲಿ ‘ಆಶಾ ಕಿರಣ’ ಯೋಜನೆಯಡಿ 1.40 ಕೋಟಿ ಮಂದಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 24.50 ಲಕ್ಷ ಜನರಲ್ಲಿ ನೇತ್ರ ಸಮಸ್ಯೆ ದೃಢಪಟ್ಟಿದೆ. 

ಲಾಲ್‌ಬಾಗ್ ಪ್ರವೇಶಕ್ಕೆ ಮತ್ತೊಂದು ಗೇಟ್‌ | ಪರಿಸರಕ್ಕೆ ಧಕ್ಕೆ: ವಾಯುವಿಹಾರಿಗಳ ದೂರು

‘ಸಸ್ಯಕಾಶಿ’ ಲಾಲ್‌ಬಾಗ್‌ಗೆ ಪ್ರವೇಶಿಸಲು ಮತ್ತೊಂದು ಗೇಟ್‌ ತೆರೆಯಲಾಗುತ್ತಿದೆ. ಇದರಿಂದ ಉದ್ಯಾನದ ಪರಿಸರಕ್ಕೆ ಧಕ್ಕೆಯಾಗಲಿದೆ’ ಎಂದು ಲಾಲ್‌ಬಾಗ್‌ ವಾಯುವಿಹಾರಿಗಳು ದೂರಿದ್ದಾರೆ. 

T20 WC | ಜಿಂಬಾಬ್ವೆ ವಿರುದ್ಧ 72 ರನ್‌ಗಳ ಜಯ: ಭಾರತದ ಸೆಮಿ ಕನಸು ಜೀವಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.