ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಜೂನ್‌ 1, 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2023, 13:00 IST
Last Updated 1 ಜೂನ್ 2023, 13:00 IST
   

ರಾಜ್ಯ, ರಾಷ್ಟ್ರೀಯ, ವಿದೇಶ, ಬೆಂಗಳೂರು, ಟ್ರೆಂಡಿಂಗ್ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಖಾಲಿ‌ ಜಮೀನಿನಲ್ಲಿ‌ ಬಿದ್ದ ವಾಯುಪಡೆ ಲಘು ವಿಮಾನ: ಆಗಿದ್ದೇನು?

ಖಾಲಿ‌ ಜಮೀನಿನಲ್ಲಿ‌ ಬಿದ್ದ ವಾಯುಪಡೆ ಲಘು ವಿಮಾನ

ಭಾರತೀಯ ವಾಯುಸೇನೆಯ 'ಕಿರಣ್' ತರಬೇತಿ ವಿಮಾನವೊಂದು ಗುರುವಾರ ಚಾಮರಾಜನಗರ ತಾಲ್ಲೂಕಿನ ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಪ್ಪಯ್ಯನಪುರದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಂಗ್ ಕಮಾಂಡರ್ ತೇಜ್ ಪಾಲ್ (50) ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಭೂಮಿಕಾ (28) ಅವರು ವಿಮಾನ ನಿಯಂತ್ರಣ ತಪ್ಪುತ್ತಲೇ ಪ್ಯಾರಚೂಟ್ ಮೂಲಕ ಸುರಕ್ಷಿತವಾಗಿ ಕೆಳಕ್ಕೆ ಇಳಿದಿದ್ದಾರೆ.

ಪೂರ್ತಿ ಓದಲು: ಖಾಲಿ‌ ಜಮೀನಿನಲ್ಲಿ‌ ಬಿದ್ದ ವಾಯುಪಡೆ ಲಘು ವಿಮಾನ: ಆಗಿದ್ದೇನು?

ADVERTISEMENT

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹83.50 ಕಡಿತ

ಪ್ರಾತಿನಿಧಿಕ ಚಿತ್ರ

ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಉದ್ದಿಮೆಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ ಎಲ್‌ಪಿಜಿ ಸಿಲಿಂಡರ್‌ ದರ ಗುರುವಾರ ₹83.50 ಕಡಿತಗೊಂಡಿದೆ. ದೆಹಲಿಯಲ್ಲಿ 19ಕೆ.ಜಿಯ ವಾಣಿಜ್ಯ ಸಿಲಿಂಡರ್‌ ಬೆಲೆ ₹1773 ಆಗಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಗುರುವಾರ ತನ್ನ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಪೂರ್ತಿ ಓದಲು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ₹83.50 ಕಡಿತ

ಸಿದ್ದರಾಮಯ್ಯ, ಡಿಕೆ‌ಶಿ ಜಾತಿ ಪ್ರೇಮ ಉಳಿದವರಿಗೆ ಮಾದರಿಯಾಗಲಿ: ಪ್ರಣವಾನಂದ ಸ್ವಾಮೀಜಿ

ಪ್ರಣವಾನಂದ ಸ್ವಾಮೀಜಿ

ಸಿದ್ದರಾಮಯ್ಯ ಹಿಂದೆ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುರುಬ ಸಮುದಾಯಕ್ಕೆ ಸುಮಾರು ಹತ್ತು ಸಾವಿರ ಕೋಟಿ ಅನುದಾನ ನೀಡಿದ್ದರು. ಡಿ.ಕೆ‌.ಶಿವಕುಮಾರ್ ಕೂಡ ಒಕ್ಕಲಿಗರಿಗೆ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಜಾತಿಪ್ರೇಮ ಈಡಿಗ ನಾಯಕರಿಗೂ ಅರಿವಾಗಬೇಕು ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಪೂರ್ತಿ ಓದಲು: ಸಿದ್ದರಾಮಯ್ಯ, ಡಿಕೆ‌ಶಿ ಜಾತಿ ಪ್ರೇಮ ಉಳಿದವರಿಗೆ ಮಾದರಿಯಾಗಲಿ: ಪ್ರಣವಾನಂದ ಸ್ವಾಮೀಜಿ

ಕೋರ್ಟ್ ಆವರಣದಲ್ಲಿ ಸಿಸೋಡಿಯಾ ಮೇಲೆ ಹಲ್ಲೆ ಆರೋಪ: ಸಿಸಿಟಿವಿ ವಿಡಿಯೊ ಸಂರಕ್ಷಿಸಲು ಸೂಚನೆ

ಮನೀಶ್‌ ಸಿಸೋಡಿಯಾ

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ದಿನ ನ್ಯಾಯಾಲಯದ ಆವರಣದಲ್ಲಿ ಭದ್ರತಾ ಸಿಬ್ಬಂದಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಆರೋಪಿಸಿದ್ದು, ಮೇ 23ರ ಸಿಸಿಟಿವಿ ದೃಶ್ಯಾವಳಿಯನ್ನು ಸಂರಕ್ಷಿಸಿಡುವಂತೆ ದೆಹಲಿ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿದೆ.

ಪೂರ್ತಿ ಓದಲು: ಕೋರ್ಟ್ ಆವರಣದಲ್ಲಿ ಸಿಸೋಡಿಯಾ ಮೇಲೆ ಹಲ್ಲೆ ಆರೋಪ: ಸಿಸಿಟಿವಿ ವಿಡಿಯೊ ಸಂರಕ್ಷಿಸಲು ಸೂಚನೆ

ತಮಿಳರು ನಮ್ಮ ಸಹೋದರರು, ಮೇಕೆದಾಟಿನಿಂದ ಉಭಯ ರಾಜ್ಯಗಳಿಗೆ ಅನುಕೂಲ: ಡಿ.ಕೆ ಶಿವಕುಮಾರ್‌

ಡಿ.ಕೆ ಶಿವಕುಮಾರ್‌

ತಮಿಳುನಾಡಿನ ನಮ್ಮ ಸೋದರರ ಮೇಲೆ ಕೋಪವಾಗಲಿ, ದ್ವೇಷವಾಗಲಿ ಇಲ್ಲ. ಅವರು ನಮ್ಮ ಅಣ್ಣತಮ್ಮಂದಿರಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ. ‌ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ’ಮೇಕೆದಾಟು ಯೋಜನೆಗೆ ಹಿಂದಿನ ಸರ್ಕಾರ ಒಂದು ಸಾವಿರ ಕೋಟಿ ರೂ. ಘೋಷಿಸಿದೆ ಆದರೆ ಖರ್ಚು ಮಾಡಿಲ್ಲ. ಯೋಜನೆಯನ್ನು ಸಾಕಾರಗೊಳಿಸಲು ಆ ಹಣ ಬಳಕೆಯಾಗಲಿದೆ. ತಮಿಳುನಾಡಿನ ನಮ್ಮ ಸಹೋದರರ ಮೇಲೆ ಕೋಪವಾಗಲಿ, ದ್ವೇಷವಾಗಲೀ ಇಲ್ಲ. ಅವರೂ ನಮ್ಮ ಅಣ್ಣತಮ್ಮಂದಿರಂತೆ‘ ಎಂದು ಹೇಳಿದ್ದಾರೆ.

ಪೂರ್ತಿ ಓದಲು: ತಮಿಳರು ನಮ್ಮ ಸಹೋದರರು, ಮೇಕೆದಾಟಿನಿಂದ ಉಭಯ ರಾಜ್ಯಗಳಿಗೆ ಅನುಕೂಲ: ಡಿ.ಕೆ ಶಿವಕುಮಾರ್‌

Adani Row: ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿಗೆ ಕೇಳಿದ 100 ಪ್ರಶ್ನೆಗಳ ಪುಸ್ತಕ ಬಿಡುಗಡೆ

ಜೈರಾಮ್ ರಮೇಶ್

ಅದಾನಿ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳಿದ 100 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಇಂದು ಪುಸ್ತಕವನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಸುದ್ದಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ ಮಾಡಿದ್ದಾರೆ.ಈ ಹಿಂದೆಯೂ ಸಂಸತ್ತಿನಲ್ಲಿ ಅದಾನಿ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ನಾವು ಒತ್ತಾಯಿಸಿದ್ದೇವೆ. ಈಗ ಹೊಸ ಸಂಸತ್ತಿನ ಮುಂಗಾರು ಅಧಿವೇಶನದಲ್ಲೂ ಜೆಪಿಸಿ ತನಿಖೆಗೆ ಒತ್ತಾಯಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಲು: Adani Row: ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿಗೆ ಕೇಳಿದ 100 ಪ್ರಶ್ನೆಗಳ ಪುಸ್ತಕ ಬಿಡುಗಡೆ

ಭಾರತ–ನೇಪಾಳದ ಸಂಬಂಧವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇವೆ: ಮೋದಿ

ನೇಪಾಳ ಪ್ರಧಾನಿ ಪುಷ್ಪಕಮಲ ದಹಾಲ್ ಪ್ರಚಂಡ ಮತ್ತು ನರೇಂದ್ರ ಮೋದಿ

ಭಾರತ ಮತ್ತು ನೇಪಾಳ ದೇಶಗಳು ತಮ್ಮ ನಡುವಿನ ಬಾಂಧವ್ಯವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಲಿವೆ. ಗಡಿ ಸಮಸ್ಯೆಗಳು ಮತ್ತು ಅದಕ್ಕೆ ಸಂಬಂಧಿಸಿದ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೇಪಾಳ ಪ್ರಧಾನಿ ಪುಷ್ಪಕಮಲ ದಹಾಲ್ ಪ್ರಚಂಡ ಅವರ ಜೊತೆ ವಿಸ್ತೃತ ಮಾತುಕತೆ ಬಳಿಕ ಮೋದಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಪೂರ್ತಿ ಓದಲು: ಭಾರತ–ನೇಪಾಳದ ಸಂಬಂಧವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇವೆ: ಮೋದಿ

Wrestlers Protest: ಪ್ರಕರಣ ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದೇವೆ: ಅನುರಾಗ್

ಕುಸ್ತಿಪಟುಗಳ ಪ್ರತಿಭಟನೆ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದೇವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಪೂರ್ತಿ ಓದಲು: Wrestlers Protest: ಪ್ರಕರಣ ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದೇವೆ: ಅನುರಾಗ್

ಜೊಕೊವಿಚ್‌ ರಾಜಕೀಯ ಹೇಳಿಕೆ | ನಿಯಮ ಉಲ್ಲಂಘನೆ ಆಗಿಲ್ಲ: ಐಟಿಎಫ್‌

ನೊವಾಕ್‌ ಜೊಕೊವಿಚ್‌

‘ಕೊಸೊವೊ ಸರ್ಬಿಯಾದ ಹೃದಯವಿದ್ದಂತೆ’ ಎಂದು ಸರ್ಬಿಯಾ ಆಟಗಾರ ನೊವಾಕ್‌ ಜೊಕೊವಿಚ್‌ ಹೇಳಿಕೆಯಿಂದ ನಿಯಮಗಳ ಉಲ್ಲಂಘನೆಯಾಗಿಲ್ಲ. ಗ್ರ್ಯಾಂಡ್‌ಸ್ಲ್ಯಾಮ್‌ ನಿಯಮಾವಳಿಗಳು ರಾಜಕೀಯ ಹೇಳಿಕೆಯನ್ನು ನಿರ್ಬಂಧಿಸುವುದಿಲ್ಲ ಎಂದು ಇಂಟರ್‌ನ್ಯಾಷನಲ್‌ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಬುಧವಾರ ತಿಳಿಸಿದೆ.

ಪೂರ್ತಿ ಓದಲು: ಜೊಕೊವಿಚ್‌ ರಾಜಕೀಯ ಹೇಳಿಕೆ | ನಿಯಮ ಉಲ್ಲಂಘನೆ ಆಗಿಲ್ಲ: ಐಟಿಎಫ್‌

ರಾಜಸ್ಥಾನದಲ್ಲಿ 100 ಯುನಿಟ್‌ ವಿದ್ಯುತ್‌ ಉಚಿತ: ಅಶೋಕ್‌ ಗೆಹಲೋತ್‌ ಘೋಷಣೆ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಪ್ರತಿ ಮನೆಗಳಿಗೂ 100 ಯುನಿಟ್‌ಗಳ ಉಚಿತ ವಿದ್ಯುತ್‌ಅನ್ನು ನೀಡುವುದಾಗಿ ಬುಧವಾರ ಘೋಷಣೆ ಮಾಡಿದ್ದಾರೆ. ‘ತಿಂಗಳಿಗೆ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆ ಬಿಲ್‌ ಇರುವುದಿಲ್ಲ. ಅದಕ್ಕಿಂತಲೂ ಹೆಚ್ಚು ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು. ಅಂದರೆ, ಎಷ್ಟೇ ಬಿಲ್‌ ಬಂದರೂ ಮೊದಲ 100 ಯುನಿಟ್‌ಗೆ ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿಲ್ಲ‘ ಎಂದು ಟ್ವೀಟ್‌ ಮಾಡಿದ್ದಾರೆ.

ಪೂರ್ತಿ ಓದಲು: ರಾಜಸ್ಥಾನದಲ್ಲಿ 100 ಯುನಿಟ್‌ ವಿದ್ಯುತ್‌ ಉಚಿತ: ಅಶೋಕ್‌ ಗೆಹಲೋತ್‌ ಘೋಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.