ADVERTISEMENT

ಜಮ್ಮು: ಗಡಿಯಲ್ಲಿ 105 ಅಡಿ ಎತ್ತರದಲ್ಲಿ ಹಾರಲಿದೆ ತ್ರಿವರ್ಣ ಧ್ವಜ

ಪಿಟಿಐ
Published 13 ಡಿಸೆಂಬರ್ 2025, 16:51 IST
Last Updated 13 ಡಿಸೆಂಬರ್ 2025, 16:51 IST
ಭಾರತದ ತ್ರಿವರ್ಣ ಧ್ವಜ
ಭಾರತದ ತ್ರಿವರ್ಣ ಧ್ವಜ   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯ ಹಳ್ಳಿಯೊಂದರಲ್ಲಿ 105 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಲು ಧ್ವಜಸ್ತಂಭ ನಿರ್ಮಾಣಕ್ಕೆ ಶನಿವಾರ ಸೇನೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಮದು ಅಧಿಕಾರಿಗಳು ತಿಳಿಸಿದ್ದಾರೆ.

ನಿಯಂತ್ರಣ ರೇಖೆಗೆ ಸಮೀಪವಿರುವ ಪ್ರದೇಶಗಳಲ್ಲಿ ಈ ಧ್ವಜವು ರಾಷ್ಟ್ರೀಯ ಹೆಮ್ಮೆ, ಏಕತೆ ಮತ್ತು ರಾಷ್ಟ್ರೀಯ ಚೈತನ್ಯದ ಸಂಕೇತವಾಗಿರುತ್ತದೆ ಎಂದು ಅವರು ಹೇಳಿದರು.

ಏಸ್ ಆಫ್ ಸ್ಪೇಡ್ಸ್ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್, ಮೇಜರ್ ಜನರಲ್ ಕೌಶಿಕ್ ಮುಖರ್ಜಿ ಅವರು ಬಂಡಿಚೆಚಿಯಾನ್ ಗ್ರಾಮದ ಬನ್ವಾಟ್ ವ್ಯೂ ಪಾಯಿಂಟ್‌ನಲ್ಲಿ ರಾಷ್ಟ್ರಧ್ವಜಕ್ಕೆ ಅಡಿಪಾಯ ಹಾಕಿದರು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪೂಂಚ್‌ನ ರಮಣೀಯ ಪ್ರಕೃತಿ ಸೌಂದರ್ಯದ ನಡುವೆ ನಿರ್ಮಿಸಲಾಗುವ ಧ್ವಜಸ್ತಂಭವು ರಾಷ್ಟ್ರೀಯ ಹೆಮ್ಮೆಯ ಮತ್ತು ರಾಷ್ಟ್ರವನ್ನು ರಕ್ಷಿಸಲು ಮಾಡಿದ ತ್ಯಾಗಗಳಿಗೆ ಗೌರವವಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಇದು ಈ ಗಡಿ ಪ್ರದೇಶದಲ್ಲಿ ವಾಸಿಸುವ ಜನರ ಧೈರ್ಯ, ಸ್ಥಿತಿಸ್ಥಾಪಕತ್ವ ಮತ್ತು ಆಕಾಂಕ್ಷೆಗಳ ಶಾಶ್ವತ ಸಂಕೇತವಾಗಿ ನಿಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ, ಸಾಮೂಹಿಕ ಭಾಗವಹಿಸುವಿಕೆ, ಹಂಚಿಕೆಯ ಜವಾಬ್ದಾರಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಸಾಮಾನ್ಯ ದೃಷ್ಟಿಕೋನದ ಮೂಲಕ ಸಮುದಾಯ ಬಾಂಧವ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಒಂದು ತಿಂಗಳ ಅವಧಿಯ ಸಾಮಾಜಿಕ ಉಪಕ್ರಮಕ್ಕೂ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬರುವ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜದ ಉದ್ಘಾಟನೆಯನ್ನು ನಿಗದಿಪಡಿಸಲಾಗಿದೆ.

ಬನ್ವತ್ ವ್ಯೂ ಪಾಯಿಂಟ್ ದೇಶಭಕ್ತಿಯ ಭಾವನೆಯನ್ನು ಹುಟ್ಟುಹಾಕುವ ಕೇಂದ್ರವಾಗಿ ಹೊರಹೊಮ್ಮಬೇಕು, ಜೊತೆಗೆ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಬೇಕು, ಸ್ಥಳೀಯ ಸಾಂಸ್ಕೃತಿಕ ಗುರುತನ್ನು ಬಲಪಡಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರು, ಸಮುದಾಯ ಪ್ರತಿನಿಧಿಗಳು, ನಾಗರಿಕ ಗಣ್ಯರು ಮತ್ತು ಸೇನಾ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.