ADVERTISEMENT

ಟ್ರಂಪ್ ಬಗ್ಗೆ ಮೋದಿಗೆ ಭಯ; ದೊಡ್ಡ ಉದ್ಯಮಿಗಳ 'ರಿಮೋಟ್ ಕಂಟ್ರೋಲ್': ರಾಹುಲ್

ಪಿಟಿಐ
Published 2 ನವೆಂಬರ್ 2025, 8:59 IST
Last Updated 2 ನವೆಂಬರ್ 2025, 8:59 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ಬೇಗುಸರಾಯ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೆದರಿದ್ದಾರೆ. ಅಲ್ಲದೆ ದೊಡ್ಡ ಉದ್ಯಮಿಗಳ 'ರಿಮೋಟ್ ಕಂಟ್ರೋಲ್' ಆಗಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಭಾನುವಾರ) ಆರೋಪ ಮಾಡಿದ್ದಾರೆ.

ADVERTISEMENT

ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ವಿಶಾಲವಾದ ಎದೆಯನ್ನು ಹೊಂದಿರುವುದರಿಂದ ಮಾತ್ರ ಬಲಿಷ್ಠರಾಗುವುದಿಲ್ಲ. ಮಹಾತ್ಮ ಗಾಂಧೀಜಿ ಅವರನ್ನು ನೋಡಿ, ದುರ್ಬಲವಾದ ಮೈಕಟ್ಟು ಹೊಂದಿದ್ದರೂ ಬ್ರಿಟಿಷರ ವಿರುದ್ಧ ಹೋರಾಡಿದರು' ಎಂದು ರಾಹುಲ್ ಉಲ್ಲೇಖಿಸಿದ್ದಾರೆ.

'56 ಇಂಚಿನ ಎದೆಯ ಪ್ರಧಾನಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಟ್ರಂಪ್ ಕರೆ ಮಾಡಿದ ಬೆನ್ನಲ್ಲೇ 'ಪ್ಯಾನಿಕ್ ಅಟ್ಯಾಕ್‌'ಗೆ ಒಳಗಾದರು. ಎರಡು ದಿನಗಳಲ್ಲೇ ಸೇನಾ ಸಂಘರ್ಷ ಕೊನೆಗೊಂಡಿತು. ಟ್ರಂಪ್ ಬಗ್ಗೆ ಅವರಿಗೆ ಭಯ ಕಾಡುತ್ತಿದೆ' ಎಂದು ಆಪಾದಿಸಿದ್ದಾರೆ.

'ಟ್ರಂಪ್‌ಗೆ ಹೆದರುವುದಷ್ಟೇ ಅಲ್ಲದೆ ಅಂಬಾನಿ, ಅದಾನಿ ಅವರಂತಹ ದೊಡ್ಡ ಉದ್ಯಮಿಗಳ 'ರಿಮೋಟ್ ಕಂಟ್ರೋಲ್' ಕೂಡಾ ಆಗಿದ್ದಾರೆ' ಎಂದು ಟೀಕಿಸಿದ್ದಾರೆ.

'ಜಿಎಸ್‌ಟಿ, ನೋಟು ಅಮಾನ್ಯೀಕರಣ ಸೇರಿದಂತೆ ಮೋದಿ ಸರ್ಕಾರದ ನೀತಿಗಳು, ಸಣ್ಣ ಉದ್ದಮಿಗಳನ್ನು ನಾಶಮಾಡುವ ಮತ್ತು ದೊಡ್ಡ ವ್ಯವಹಾರಗಳಿಗೆ ಲಾಭ ತರುವ ಗುರಿಯನ್ನು ಹೊಂದಿದೆ' ಎಂದು ಹೇಳಿದ್ದಾರೆ.

'ಮತ ಹಾಗೂ ಅಧಿಕಾರಕ್ಕಾಗಿ ಪ್ರಧಾನಿ ಮೋದಿ ಏನು ಬೇಕಾದರೂ ಮಾಡಬಹುದು. ಅವರಿಗೆ ಯೋಗ ಮಾಡಲು ಹೇಳಿ. ಅದನ್ನು ಮಾಡಿ ತೋರಿಸುತ್ತಾರೆ' ಎಂದು ವ್ಯಂಗ್ಯ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.