ADVERTISEMENT

ಅಫ್ಗಾನ್‌ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್‌ ಮಾಡಲಾಗಿದೆ: ರಾಯಭಾರ ಕಚೇರಿ ಅಧಿಕಾರಿ

ಪಿಟಿಐ
Published 16 ಆಗಸ್ಟ್ 2021, 11:41 IST
Last Updated 16 ಆಗಸ್ಟ್ 2021, 11:41 IST
ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ
ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ   

ನವದೆಹಲಿ: ‌ಅಫ್ಗಾನಿಸ್ತಾನದ ಅಧಿಕೃತ ಟ್ವಿಟರ್ @AfghanistanInIN ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಭಾರತದಲ್ಲಿರುವ ಅಫ್ಗಾನ್‌ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲ್ಲಿರುವ ಅಫ್ಗಾನಿಸ್ತಾನ ರಾಯಭಾರ ಕಚೇರಿಯ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ಹಾಕ್ ಆಜಾದ್ ಈ ಕುರಿತು ಟ್ವೀಟ್ ಮಾಡಿದ್ದು, ‘ನಾನು ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯ ಮೇಲಿನ ನಿಯಂತ್ರಣವನ್ನು ಕಳೆದು ಕೊಂಡಿದ್ದೇನೆ. ಜೊತೆಗೆ ಅಧ್ಯಕ್ಷ ಘನಿ ಪಲಾಯನದ ವಿರುದ್ಧ ಟೀಕಿಸಿದ್ದ ಸಂದೇಶದ ಸ್ಕ್ರೀನ್‌ಶಾಟ್ ಕೂಡ ಕಳೆದು ಹೋಗಿದೆ‘ ಎಂದು ಅವರು ಹೇಳಿದ್ದಾರೆ.

‘ಅಫ್ಗಾನಿಸ್ತಾನದ ಅಧಿಕೃತ ಟ್ವೀಟ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ. ನನಗೆ ಟ್ವೀಟ್‌ ಕಾಣದಂತೆ ಮರೆಮಾಡಲಾಗಿದೆ. ನಾನು ಲಾಗ್‌ ಇನ್‌ ಆಗಲು ಪ್ರಯತ್ನಿಸಿದರೂ, ಖಾತೆಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ‘ ಎಂದು ಅಜಾದ್‌ತಮ್ಮ ವೈಯಕ್ತಿಕ ಖಾತೆಯಿಂದ ಟ್ವೀಟ್‌ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ನಂತರ, ಘನಿ ಅವರನ್ನು ಟೀಕಿಸಿ ಪೋಸ್ಟ್‌ ಮಾಡಿದ್ದ ಟ್ವೀಟ್‌ಗಳನ್ನು ಅಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.