ADVERTISEMENT

ಮೀರಟ್: ಎಂಬಿಬಿಎಸ್‌, ಬಿಎಎಂಎಸ್‌ ನಕಲಿ ಪದವಿ ಪ್ರಮಾಣ ಪತ್ರಗಳ ಮಾರಾಟ; ಇಬ್ಬರ ಬಂಧನ

ಪಿಟಿಐ
Published 29 ಮಾರ್ಚ್ 2025, 5:05 IST
Last Updated 29 ಮಾರ್ಚ್ 2025, 5:05 IST
<div class="paragraphs"><p>ಬಂಧನ ( ಸಾಂಕೇತಿಕ ಚಿತ್ರ)</p></div>

ಬಂಧನ ( ಸಾಂಕೇತಿಕ ಚಿತ್ರ)

   

ಮೀರಟ್‌: ಎಂಬಿಬಿಎಸ್‌ ಮತ್ತು ಬಿಎಎಂಎಸ್‌ ನಕಲಿ ಪದವಿಗಳ ಪ್ರಮಾಣ ಪತ್ರಗಳನ್ನು ಮಾರಾಟ ಮಾಡುತ್ತಿದ್ಧ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೊಮೇನಿಯಾದಲ್ಲಿ ಎಂಬಿಬಿಎಸ್‌ ಪ್ರವೇಶ ಕೊಡಿಸುವುದಾಗಿ ನಂಬಿಸಿ ಸೂರಜ್‌ ಪ್ರಕಾಶ್‌ ಎಂಬಾತ ₹5.8 ಲಕ್ಷ ಹಣ ತೆಗೆದುಕೊಂಡಿದ್ದರು. ಆದರೆ, ಪ್ರವೇಶಾತಿ ಕೊಡಿಸದೆ, ಹಣವನ್ನು ಹಿಂದಿರುಗಿಸದೆ ನಕಲಿ ಪ್ರಮಾಣಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಿ ಮೀರಟ್‌ನ ಭಟ್ವಾಡಾ ನಿವಾಸಿ ಅರ್ಪಿತ್‌ ಜೈನ್‌ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಗುರುವಾರ ಪ್ರಕರಣ ದಾಖಲಿಸಲಾಯಿತು ಎಂದು ಜಿಲ್ಲಾ ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪ್ರಕರಣ ಕುರಿತು ತನಿಖೆ ನಡೆಸಿದ ಪೊಲೀಸರು ಸೂರಜ್ ಪ್ರಕಾಶ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಜಾನ್‌ಪುರದ ಬಿಲಾಲ್‌ ಎಂಬಾತ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಆರೋಪಿ ತಿಳಿಸಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ. ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಉಪಕರಣಗಳು, ಮೂರು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೂರಜ್ ಪ್ರಕಾಶ್ ಅವರ ಮೊಬೈಲ್ ಫೋನ್ ಮತ್ತಷ್ಟು ಪರಿಶೀಲಿಸಿದಾಗ ನಕಲಿ ಪದವಿ ಪಡೆದ ಇತರ ವಿದ್ಯಾರ್ಥಿಗಳ ಮಾಹಿತಿ ಕಂಡುಬಂದಿದೆ. ಅಲ್ಲದೆ, ದೇಶದಾದ್ಯಂತ ಸುಮಾರು 15 ವಿಶ್ವವಿದ್ಯಾಲಯಗಳ ದತ್ತಾಂಶಗಳು ಲ್ಯಾಪ್‌ಟಾಪ್‌ನಲ್ಲಿ ಇರುವುದು ತಿಳಿದು ಬಂದಿದೆ. ಈ ಇಬ್ಬರೂ ಆರೋಪಿಗಳು ನಕಲಿ ಪದವಿ ಪ್ರಮಾಣ ಪತ್ರ ನೀಡಲು ₹10–15 ಲಕ್ಷ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.