ADVERTISEMENT

ಬಜೆಟ್‌ನಲ್ಲಿ ಮಹಿಳೆ, ಬಡ, ಮಧ್ಯಮ ವರ್ಗದ ಕಲ್ಯಾಣಕ್ಕೆ ಯೋಜನೆಗಳು: ಮೋದಿ ಸುಳಿವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 11:15 IST
Last Updated 31 ಜನವರಿ 2025, 11:15 IST
<div class="paragraphs"><p>ನರೇಂದ್ರ ಮೋದಿ, ಪ್ರಧಾನಿ</p></div>

ನರೇಂದ್ರ ಮೋದಿ, ಪ್ರಧಾನಿ

   

–ರಾಯಿಟರ್ಸ್ ಚಿತ್ರ

ನವದೆಹಲಿ: ಫೆ. 1ರಂದು ಮಂಡಿಸಲಾಗುವ ಕೇಂದ್ರ ಬಜೆಟ್‌ನಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಯೋಜನೆಗಳನ್ನು ಘೋಷಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ.

ADVERTISEMENT

ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಡ ಮತ್ತು ಮಧ್ಯಮ ವರ್ಗದವರಿಗೆ ವಿಶೇಷ ಆಶೀರ್ವಾದಕ್ಕಾಗಿ ಸಂಪತ್ತು ಮತ್ತು ಸಮೃದ್ಧಿ ದೇವತೆ ಲಕ್ಷ್ಮಿಯನ್ನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮಹಿಳೆಯರಿಗೆ ಸಮಾನ ಹಕ್ಕುಗಳ ಮಹತ್ವದ ಬಗ್ಗೆ ಪ್ರತಿಪಾದಿಸಿದ ಅವರು, ಮಹಿಳೆಯರನ್ನು ಧಾರ್ಮಿಕ ಹಾಗೂ ಪಂಥೀಯ ಭೇದಗಳಿಂದ ಮುಕ್ತಗೊಳಿಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ನುಡಿದಿದ್ದಾರೆ. ಅಲ್ಲದೆ ಮಹಿಳೆಯರ ಘನತೆಯನ್ನು ಸ್ಥಾಪಿಸುವ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.

‘ಈ ಅಧಿವೇಶನದಲ್ಲಿ ಹಲವಾರು ಐತಿಹಾಸಿಕ ಮಸೂದೆಗಳು ಮತ್ತು ಪ್ರಸ್ತಾಪಗಳನ್ನು ಚರ್ಚಿಸಲಾಗುವುದು. ಇದು ರಾಷ್ಟ್ರವನ್ನು ಬಲಪಡಿಸುವ ಕಾನೂನುಗಳಿಗೆ ಕಾರಣವಾಗುತ್ತದೆ’ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.