ADVERTISEMENT

‘ವೋಟ್‌ ಜಿಹಾದ್’ ಪದ ಬಳಕೆ ಬಗ್ಗೆ ಪರಿಶೀಲನೆ: ಡಾ.ಕಿರಣ್‌ ಕುಲಕರ್ಣಿ

ಪಿಟಿಐ
Published 11 ಡಿಸೆಂಬರ್ 2024, 12:51 IST
Last Updated 11 ಡಿಸೆಂಬರ್ 2024, 12:51 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ಮುಂಬೈ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಕೆಲವು ರಾಜಕೀಯ ಪಕ್ಷಗಳು ಬಳಸಿದ್ದ ವಿವಾದಾತ್ಮಕ ಪದ ‘ವೋಟ್‌– ಜಿಹಾದ್‌’ ಬಗ್ಗೆ ಚುನಾವಣಾ ಆಯೋಗವು ಸಮಗ್ರ ಪರಿಶೀಲನೆ ನಡೆಸುತ್ತಿದೆ ಎಂದು ಮಹಾರಾಷ್ಟ್ರ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಡಾ.ಕಿರಣ್‌ ಕುಲಕರ್ಣಿ ಬುಧವಾರ ತಿಳಿಸಿದರು.

ಪಿಟಿಐ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ 650ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ಹೇಳಿದರು.

‘ಮುಂದಿನ ಕ್ರಮ ತೆಗೆದುಕೊಳ್ಳುವ ಮೊದಲು ಕಾನೂನು, ಭಾಷಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ‘ವೋಟ್‌– ಜಿಹಾದ್‌’ ಪದ ಬೀರುವ ಪರಿಣಾಮಗಳನ್ನು ಚುನಾವಣಾ ಆಯೋಗವು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿದೆ. ‘ವೋಟ್ ಜಿಹಾದ್’ನಂತಹ ಪದಗಳಿಂದ ಜಾಗರೂಕರಾಗಿರಬೇಕು. ಏಕೆಂದರೆ, ಅದು ದೂರಗಾಮಿ ಪರಿಣಾಮ ಬೀರುವ ಪದ’ ಎಂದು ಹೇಳಿದರು.

ADVERTISEMENT

‘ಅಧ್ಯಯನ ಅಗತ್ಯವಿರುವ ಹೊಸ ಪದ ಇದಾಗಿದೆ. ಸಮಗ್ರ ಪರಿಶೀಲನೆ ನಂತರ ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.