
ಪಿಟಿಐ(ಸಾಂದರ್ಭಿಕ ಚಿತ್ರ)
ಭದೋಹಿ (ಉತ್ತರ ಪ್ರದೇಶ): ಕುಡಿದ ಅಮಲಿನಲ್ಲಿ ಹೆಂಡತಿಯೊಂದಿಗೆ ಜಗಳವಾಡಿಕೊಂಡ ರಾಮ್‌ಜಿ ವನವಾಸಿ ಎಂಬಾತ, ತನ್ನ ನಾಲ್ಕು ವರ್ಷದ ಮಗನನ್ನು ನೆಲಕ್ಕೆ ಬಡಿದು ಕೊಂದಿದ್ದಾನೆ.
ಸೂರ್ಯವಾನ್ ಪ್ರದೇಶದ ಗುವಾಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಕುಡಿದು ಮನೆಗೆ ಬಂದ ಆರೋಪಿಯು ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಮಲಗಿದ್ದ ಮಗ ವಿಕಾಸ್‌ನನ್ನು ಎತ್ತಿಕೊಂಡು ಅನೇಕ ಬಾರಿ ನೆಲಕ್ಕೆ ಬಡಿದು ಅಲ್ಲಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಗು ಮೃತಪಟ್ಟಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮಗುವಿನ ಅಜ್ಜಿ ಪ್ರತಿಭಾವತಿ ದೇವಿ ನೀಡಿದ ದೂರಿನನ್ವಯ, ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.