ADVERTISEMENT

ಕ್ರೈಸ್ತರು ಎಸಗಿದ 'ಅಪರಾಧ'ಕ್ಕೆ ಪೋಪ್‌ ಫ್ರಾನ್ಸಿಸ್‌ ಕ್ಷಮೆ ಕೇಳಬೇಕು: ವಿಎಚ್‌ಪಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 12:51 IST
Last Updated 25 ಡಿಸೆಂಬರ್ 2021, 12:51 IST
ರೋಮ್‌ನಲ್ಲಿ ನಡೆದ ಜಿ 20 ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪೋಪ್‌ ಫ್ರಾನ್ಸಿಸ್‌ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು.
ರೋಮ್‌ನಲ್ಲಿ ನಡೆದ ಜಿ 20 ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪೋಪ್‌ ಫ್ರಾನ್ಸಿಸ್‌ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದರು.   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಅವರನ್ನು ಭಾರತಕ್ಕೆ ಆಹ್ವಾನಿಸಿ ಒಂದು ತಿಂಗಳು ಕಳೆದಿದೆ. ಫ್ರಾನ್ಸಿಸ್‌ ಅವರುಭಾರತಕ್ಕೆ ಆಗಮಿಸಿದಾಗ 'ಕ್ರೈಸ್ತರು ಎಸಗಿರುವ ಅಪರಾಧಗಳಿಗೆ ಕ್ಷಮೆ ಕೇಳಬೇಕು' ಎಂದುವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆಗ್ರಹಿಸಿದೆ.

ಗುಜರಾತ್‌ನ ಜುನಾಗಢದಲ್ಲಿ ನಡೆಯುತ್ತಿರುವ ಟ್ರಸ್ಟಿ ಮತ್ತು ಗವರ್ನಿಂಗ್‌ ಕೌನ್ಸಿಲ್‌ನ ಎರಡನೇ ದಿನದ ಸಭೆಯಲ್ಲಿ ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್‌ ಕುಮಾರ್‌ ಮಾತನಾಡಿದರು. ಪೋಪ್‌ ಭಾರತಕ್ಕೆ ಆಗಮಿಸಿದಾಗ ಕ್ಷಮೆ ಕೇಳಬೇಕು ಮತ್ತು ಮತಾಂತರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

'ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿ ಪೋಪ್‌ ಅವರುಮಾತನಾಡಬೇಕು. 350 ವರ್ಷಗಳ ಕಾಲ ಕ್ರೈಸ್ತರು ನಿರಂತರವಾಗಿ ಮತಾಂತರದ ಪ್ರಯತ್ನಗಳನ್ನು ನಡೆಸಿದ್ದಾರೆ, ಜನಾಂಗೀಯ ಹತ್ಯೆ ಮಾಡಿದ್ದಾರೆ ಮತ್ತು ಸಾಮೂಹಿಕ ಮತಾಂತರ ನಡೆಸಿದ್ದಾರೆ. ಆದ್ದರಿಂದ ಪೋಪ್‌ಭಾರತಕ್ಕೆ ಆಗಮಿಸಿದಾಗ, ಇದೆಲ್ಲದಕ್ಕೂ ಕ್ಷಮೆ ಕೇಳಬೇಕು. ಮತಾಂತರವನ್ನು ನಿಲ್ಲಿಸುವ ಮೂಲಕ ಎಲ್ಲ ಧರ್ಮಗಳಿಗೂ ಗೌರವ ನೀಡಬೇಕು' ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

ADVERTISEMENT

ಹೆಚ್ಚು ಕ್ರೈಸ್ತರಿರುವ ಗೋವಾ ಮತ್ತು ಮಣಿಪುರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನೆವೇ'ಪೋಪ್‌ ಕ್ಷಮೆಯಾಚಿಸಬೇಕು' ಎಂದು ವಿಎಚ್‌ಪಿ ಆಗ್ರಹಿಸುತ್ತಿರುವುದರಿಂದಬಿಜೆಪಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

1999ರಲ್ಲಿ ಪೋಪ್‌ 2ನೇ ಜಾನ್‌ ಪೌಲ್‌ ಅವರು ಭಾರತಕ್ಕೆ ಆಗಮಿಸಿದ್ದಾಗ, ಬೈಬಲ್‌ನಲ್ಲಿರುವ ಕ್ರೈಸ್ತರ ದೇವರನ್ನು ಹೊರತುಪಡಿಸಿ ಬೇರೆ ದೇವರುಗಳ ಸಿಂಧುತ್ವವನ್ನು ಘೋಷಿಸುವಂತೆ ವಿಎಚ್‌ಪಿ ಒತ್ತಾಯಿಸಿತ್ತು. ರಾಷ್ಟ್ರದೆಲ್ಲೆಡೆ ಮತಾತಂರ ನಿಷೇಧ ಕಾಯ್ದೆ ತರಬೇಕು ಎಂಬುದು ವಿಎಚ್‌ಪಿಯ ಪ್ರಮುಖ ಒತ್ತಾಯವಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದೆ.

ಇತ್ತೀಚೆಗೆ ಇಟಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪೋಪ್‌ ಫ್ರಾನ್ಸಿಸ್‌ ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು. ಇಬ್ಬರು ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.