ADVERTISEMENT

ತಮಿಳುನಾಡು ಎಂದರೆ ವಿಜಯ್, ವಿಜಯ್ ಎಂದರೆ ತಮಿಳುನಾಡು: DMK ವಿರುದ್ಧ ದಳಪತಿ ಗುಡುಗು

ಪಿಟಿಐ
Published 23 ಫೆಬ್ರುವರಿ 2026, 10:37 IST
Last Updated 23 ಫೆಬ್ರುವರಿ 2026, 10:37 IST
   

ವೆಲ್ಲೂರು: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ನಟ, ಟಿವಿಕೆ ಮುಖಂಡ ವಿಜಯ್‌, 'ಸುಳ್ಳು ಭರವಸೆಗಳ ಮೂಲಕ ಸಿಎಂ ಸ್ಟಾಲಿನ್‌ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2026ರ ವಿಧಾನಸಭಾ ಚುನಾವಣೆಯು ಅಚ್ಚರಿಯಿಂದ ಕೂಡಿದ್ದು, ತಮ್ಮ ಪಕ್ಷದ ವಿರುದ್ಧ ರಾಜ್ಯದ ಎಲ್ಲಾ ಪಕ್ಷಗಳು ಒಟ್ಟಾಗಿವೆ ಎಂದು ಹೇಳಿದ್ದಾರೆ.

‘ಈ ಚುನಾವಣೆಯಲ್ಲಿ ನನ್ನ ಮತ್ತು ಸ್ಟಾಲಿನ್ ಅವರ ನಡುವೆ ನೇರ ಸ್ಪರ್ಧೆ ಇರಲಿದೆ. ಇದು ಟಿವಿಕೆ ಮತ್ತು ಡಿಎಂಕೆ ನಡುವೆ ನಡೆಯುವ ಯುದ್ಧವಾಗಿದೆ. ವಿಜಯ್ ಎಂದರೆ ತಮಿಳುನಾಡು, ತಮಿಳುನಾಡು ಎಂದರೆ ವಿಜಯ್’ ಎಂದು ಗುಡುಗಿದ್ದಾರೆ.

ADVERTISEMENT

‘ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚಿಸಿದರೆ ಪ್ರತಿ ಜಿಲ್ಲೆಗೆ ಹೋಗಿ ಜನರನ್ನು ಭೇಟಿಯಾಗುತ್ತೇನೆ’ ಎಂದೂ ಭರವಸೆ ನೀಡಿದ್ದಾರೆ.

ತಮಿಳುನಾಡನ್ನು ಸೂಪರ್‌ಸ್ಟಾರ್ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಿದ್ದೇವೆ ಎಂಬ ಡಿಎಂಕೆ ಹೇಳಿಕೆಯನ್ನು ತಿರಸ್ಕರಿಸಿದ ವಿಜಯ್, ‘ಕೆ. ಕಾಮರಾಜ್, ಸಿ.ಎನ್. ಅಣ್ಣಾದೊರೈ ಮತ್ತು ಎಂ. ಜಿ. ರಾಮಚಂದ್ರನ್ ಅವರ ಕಾಲದಲ್ಲಿ ರಾಜ್ಯವು ಅದ್ಭುತವಾಗಿತ್ತು’ ಎಂದಿದ್ದಾರೆ.

ಮುಂದುವರಿದು, ಡಿಎಂಕೆ ಆಡಳಿತವನ್ನು ‘ಯಾವುದಕ್ಕೂ ಬಾರದ ಉಲ್ಟಾ ಮಾದರಿ ಸರ್ಕಾರ’ ಎಂದು ಕರೆದ ಅವರು, ರಾಜ್ಯವು ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳಿಂದ ನಡೆಸಲ್ಪಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.