ADVERTISEMENT

ಮತಗಟ್ಟೆ ಬಳಿ ಮತದಾರನಿಗೆ ಗುಂಡಿಕ್ಕಿ ಹತ್ಯೆ: ಟಿಎಂಸಿ ಕಾರ್ಯಕರ್ತರ ವಿರುದ್ಧ ಆರೋಪ

ಸೌಮ್ಯ ದಾಸ್
Published 10 ಏಪ್ರಿಲ್ 2021, 5:15 IST
Last Updated 10 ಏಪ್ರಿಲ್ 2021, 5:15 IST
ಸಾಂದರ್ಭಿಕ ಚಿತ್ರ: ಐಸ್ಟಾಕ್
ಸಾಂದರ್ಭಿಕ ಚಿತ್ರ: ಐಸ್ಟಾಕ್   

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆಯ 44 ಕ್ಷೇತ್ರಗಳಲ್ಲಿ ಇಂದು 4ನೇ ಹಂತದ ಮತದಾನ ನಡೆಯುತ್ತಿದೆ. ಈ ಮಧ್ಯೆ, ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್ಕುಚಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ಹೊರಗೆ ಸಾಲಿನಲ್ಲಿ ನಿಂತಿದ್ದ ಮತದಾರನೊಬ್ಬನನ್ನು ಟಿಎಂಸಿ ಕಾರ್ಯಕರ್ತರು ಗುಂಡಿಕ್ಕಿ ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೃತ ಮತದಾರನನ್ನು 18 ವರ್ಷದ ಆನಂದ ಬರ್ಮನ್ ಎಂದು ಗುರುತಿಸಲಾಗಿದೆ.

ಟಿಎಂಸಿ ಕಾರ್ಯಕರ್ತರೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹತ್ಯೆಗೀಡಾದ ಆನಂದ್ ಬರ್ಮನ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಆದರೆ, ಮೃತ ಬರ್ಮನ್, ಟಿಎಂಸಿ ಬೆಂಬಲಿಗ ಎಂದು ಸ್ಥಳೀಯ ಟಿಎಂಸಿ ನಾಯಕರು ಹೇಳಿಕೊಂಡಿದ್ದಾರೆ.

ಘಟನೆ ಕುರಿತಂತೆ ಚುನಾವಣಾ ಆಯೋಗವು ವರದಿ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.