ಮತದಾರರ ಗುರುತಿನ ಚೀಟಿ
(ಎಐ ಚಿತ್ರ)
ನವದಹೆಲಿ: ಮತದಾರರ ಪಟ್ಟಿಯಲ್ಲಿ ಹೊಸದಾಗಿ ನೋಂದಣಿ ಅಥವಾ ಈಗಿರುವ ಮತದಾರರ ವಿವರಗಳಲ್ಲಿನ ಬದಲಾವಣೆ ಸೇರಿದಂತೆ ಮತದಾರರ ಪಟ್ಟಿಯ ನವೀಕರಣದ 15 ದಿನಗಳಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ಇಂದು (ಬುಧವಾರ) ತಿಳಿಸಿದೆ.
ಪ್ರಸ್ತುತ ಮತದಾರರ ಗುರುತಿನ ಚೀಟಿ (ಎಪಿಕ್) ತಲುಪಲು ಒಂದು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಬೇಕಾಗುತ್ತದೆ.
ಹೊಸ ವ್ಯವಸ್ಥೆಯ ಪ್ರಕಾರ ಚುನಾವಣಾ ನೋಂದಣಿ ಅಧಿಕಾರಿಗಳು ಮತದಾರರಿಗೆ ಅಂಚೆ ಇಲಾಖೆಯ ಮೂಲಕ ಎಪಿಕ್ ಕಾರ್ಡ್ ತಲುಪುವವರೆಗೂ ಪ್ರತಿಯೊಂದು ಹಂತದ ಟ್ರ್ಯಾಕಿಂಗ್ ಅನ್ನು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಆಯೋಗವು ತಿಳಿಸಿದೆ.
ಮತದಾರರ ಗುರುತಿನ ಚೀಟಿಯ ಪ್ರತಿ ಹಂತದ ಸ್ಟೇಟಸ್ ಬಗ್ಗೆ ಎಸ್‌ಎಂಎಸ್ ಮೂಲಕ ಮತದಾರರು ಮಾಹಿತಿ ಪಡೆಯಲಿದ್ದಾರೆ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.