ಹೈದರಾಬಾದ್: ವೇಗವಾಗಿ ಮತ್ತು ಸಮರ್ಪಕವಾಗಿ ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸಲ್ಲ ನೂತನ ತಂತ್ರಜ್ಞಾನವನ್ನು ಬಿಐಟಿಎಸ್ ಪಿಲಾನಿ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎದುರಿಸುತ್ತಿರುವ ಸಾವಯವ ತ್ಯಾಜ್ಯ ನಿರ್ವಹಣೆಯ ಸವಾಲಿಗೆ ಪರಿಹಾರ ನೀಡುವ ಸಲುವಾಗಿ ಬಿಐಟಿಎಸ್ ತಂಡ ‘ಸ್ಯಾಂಡ್‌ವಿಚ್ ಏರೋಬಿಕ್–ಅನರೋಬಿಕ್–ಏರೋಬಿಕ್(ಎಸ್‌ಎಎಎನ್‌ಎ) ರಿಯಾಕ್ಟರ್’ ಅನ್ನು ನಿರ್ಮಿಸಿದೆ. ಇದಕ್ಕಾಗಿ ‘ಪೇಟೆಂಟ್’ ಅನ್ನೂ ಪಡೆದುಕೊಂಡಿದೆ.
‘ತ್ಯಾಜ್ಯ ನಿರ್ವಹಣೆಯ ಸಾಂಪ್ರದಾಯಿಕ ವ್ಯವಸ್ಥೆಯು ದೀರ್ಘ ಪ್ರಕ್ರಿಯೆಯಾಗಿದೆ ಮತ್ತು ಅದರ ಉಪ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕಡಿಮೆ ಮೌಲ್ಯವನ್ನು ಹೊಂದಿವೆ. ಹಿಂದಿನ ವ್ಯವಸ್ಥೆಯಲ್ಲಿ ತ್ಯಾಜ್ಯ ನಿರ್ವಹಣೆಗೆ 60 ದಿನ ಬೇಕಾಗುತ್ತಿತ್ತು. ಆದರೆ ಹೊಸ ತಂತ್ರಜ್ಞಾನವು ಕೇವಲ 23 ದಿನಗಳಲ್ಲಿ ತ್ಯಾಜ್ಯವನ್ನು ಸಂಸ್ಕರಣೆ ಮಾಡುತ್ತದೆ’ ಎಂದು ಸಂಶೋಧಕರು ತಿಳಿಸಿದ್ದಾರೆ.
‘ಹೊಸ ತಂತ್ರಜ್ಞಾನದಲ್ಲಿ ತ್ಯಾಜ್ಯ ಸಂಸ್ಕರಣೆಯಿಂದ ಉತ್ಪನ್ನವಾಗುವ ಜೈವಿಕ ಅನಿಲದ ಪ್ರಮಾಣ ಮತ್ತು ಜೈವಿಕ ಗೊಬ್ಬರದ ಗುಣಮಟ್ಟ ಹೆಚ್ಚಾಗಿರುತ್ತದೆ’ ಎಂದು ಹೇಳಿದ್ದಾರೆ.
ಬಿಐಟಿಎಸ್ ಪಿಲಾನಿ ಸಂಸ್ಥೆಯ ಸಂಶೋಧಕರಾದ ಡಾ. ಅಟುನ್ ರಾಯ್ ಚೌಧರಿ ಅವರು ಪ್ರೊ. ಶಂಕರ್ ಗಣೇಶ್ ಪಳನಿ ಅವರ ಜೊತೆಗೂಡಿ ಹೊಸ ತಂತಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.