ADVERTISEMENT

ಪ.ಬಂಗಾಳ ವಿಧಾನಸಭೆ ಚುನಾವಣೆ: ಇಂದು ಟಿಎಂಸಿ ಸಭೆ; ಅಭ್ಯರ್ಥಿಗಳ ಘೋಷಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 6:52 IST
Last Updated 5 ಮಾರ್ಚ್ 2021, 6:52 IST
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಚುನಾವಣಾ ಸಮಿತಿ ಸಭೆಯು ಇಂದು ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯ ನಂತರ ಬ್ಯಾನರ್ಜಿ ಅವರು ಎಲ್ಲ 294 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.

ತಾವು ನಂದಿಗ್ರಾಮದಿಂದ ಕಣಕ್ಕಿಳಿಯುವುದಾಗಿ ಬ್ಯಾನರ್ಜಿ ಜನವರಿ 18 ರಂದು ಘೋಷಿಸಿದ್ದರು. ಅದೇರೀತಿ ಅವರು 2016ರಲ್ಲಿ ಆಯ್ಕೆಯಾಗಿದ್ದ ಭವಾನಿಪುರ ಕ್ಷೇತ್ರದಿಂದಲೂ ಕಣಕ್ಕಿಳಿಯಲಿದ್ದಾರೆ.

ADVERTISEMENT

ಟಿಎಂಸಿಯು ಫೆಬ್ರುವರಿ 20ರಂದು, ʼಬಂಗಾಳವು ತನ್ನದೇ ಮಗಳನ್ನು ಬಯಸುತ್ತದೆʼ ಎಂದು ಚುನಾವಣಾ ಘೋಷಣೆ ಪ್ರಕಟಿಸಿತ್ತು.

ಈ ಬಾರಿಯ ಚುನಾವಣೆಯುಎಂಟು ಹಂತಗಳಲ್ಲಿನಡೆಯಲಿದ್ದು, ಮೊದಲ ಹಂತದ ಮತದಾನಮಾರ್ಚ್ 27ರಂದು ನಡೆಯಲಿದೆ.8ನೇ ಹಂತದ ಮತದಾನ ಏಪ್ರಿಲ್‌ 29ರಂದುನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿದೆ. ಇನ್ನೊಂದೆಡೆ ಬಿಜೆಪಿಯು ಕನಿಷ್ಠ200 ಕ್ಷೇತ್ರಗಳಲ್ಲಿ ಗೆಲ್ಲುವ ಕನಸು ಕಾಣುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್‌ ನೇತೃತ್ವದಎಡ ಪಕ್ಷಗಳು ಅಧಿಕಾರಕ್ಕೇರುವ ಯೋಜನೆಯಲ್ಲಿವೆ. ಹೀಗಾಗಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

2019ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಬರೋಬ್ಬರಿ 211 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಕಾಂಗ್ರೆಸ್‌ 44, ಎಡಪಕ್ಷಗಳು 33 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಬಿಜೆಪಿ ಕೇವಲ 3 ಕಡೆ ಜಯ ಗಳಿಸಿತ್ತು. ಆದರೆ, 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು42 ಸ್ಥಾನಗಳ ಪೈಕಿ 18 ಕಡೆಗಳಲ್ಲಿ ಗೆದ್ದು ಅಚ್ಚರಿ ಮೂಡಿಸಿತ್ತು. ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್‌ ಎರಡು ಕಡೆಗಳಲ್ಲಿ ಮಾತ್ರವೇ ಗೆದ್ದಿತ್ತು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಟಿಎಂಸಿಯ ಹಲವು ನಾಯಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.