
ನವದೆಹಲಿ: ದತ್ತಾಂಶ ಹಂಚಿಕೆ ಹೆಸರಿನಲ್ಲಿ ಪ್ರಜೆಗಳ ಖಾಸಗಿತನದ ಹಕ್ಕಿನೊಂದಿಗೆ ಆಟವಾಡಕೂಡದು ಎಂದು ಸುಪ್ರೀಂ ಕೋರ್ಟ್ ಕುಟುವಾಗಿ ನುಡಿದಿದೆ.
ಗೋಪ್ಯತಾ ನೀತಿ ಉಲ್ಲಂಘಟನೆಗೆ ₹ 213.14 ಕೋಟಿ ದಂಡ ವಿಧಿಸಿದ ಭಾರತದ ಸ್ಪರ್ಧಾತ್ಮಕ ಆಯೋಗ ತೀರ್ಮಾನವನ್ನು ಪ್ರಶ್ನಿಸಿ ವಾಟ್ಸ್‌ಆ್ಯಪ್‌ನ ಮಾತೃಸಂಸ್ಥೆ ಮೆಟಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೀಗೆ ನುಡಿದಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ ಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು ಫೆ. 9ರಂದು ಮಧ್ಯಂತರ ಆದೇಶ ಪ್ರಕಟಿಸುವುದಾಗಿ ತಿಳಿಸಿತು. ಅಲ್ಲದೆ ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಪಕ್ಷಗಾರರನ್ನಾಗಿ ಮಾಡಬೇಕು ಎಂದೂ ಇದೇ ವೇಳೆ ಆದೇಶಿಸಿತು.
‘ದತ್ತಾಂಶ ಹಂಚಿಕೆ ಹೆಸರಿನಲ್ಲಿ ಜನರ ಖಾಸಗಿತನದೊಂದಿಗೆ ಆಟವಾಡಕೂಡದು. ದತ್ತಾಂಶದ ಒಂದೇ ಒಂದು ಪದ ಕೂಡ ಹಂಚಿಕೊಳ್ಳಲು ನಾವು ಬಿಡುವುದಿಲ್ಲ. ನೀವು ಜನರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವಂತಿಲ್ಲ’ ಎಂದು ಸಿಜೆಐ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.