ADVERTISEMENT

ಪತ್ನಿ ಅಶ್ಲೀಲ ವಿಡಿಯೊ ನೋಡಿ ಹಸ್ತಮೈಥುನ ಮಾಡಿಕೊಂಡರೆ ವಿಚ್ಛೇದನ ಬೇಕಿಲ್ಲ: HC

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 9:52 IST
Last Updated 20 ಮಾರ್ಚ್ 2025, 9:52 IST
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್   

ಬೆಂಗಳೂರು: ಪತ್ನಿ ಅಶ್ಲೀಲ ವಿಡಿಯೊ ವೀಕ್ಷಿಸುತ್ತಾರೆ ಮತ್ತು ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂಬುದು ವಿಚ್ಛೇದನ ನೀಡಲು ಆಧಾರವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.

ಮದುವೆಯಾದ ತಕ್ಷಣ ಮಹಿಳೆಯರು ತಮ್ಮ ಲೈಂಗಿಕ ಸ್ವಾಯತ್ತೆಯನ್ನು ಬಿಟ್ಟುಕೊಟ್ಟಿದ್ದಾರೆಂದು ಅರ್ಥವಲ್ಲ, ಅವರಿಗೆ ಹಸ್ತಮೈಥುನ ಮಾಡಿಕೊಳ್ಳುವ ಹಕ್ಕು ಇದೆ ಎಂದು ಹೈಕೋರ್ಟ್‌ ಪೀಠ ಪ್ರತಿಪಾದಿಸಿದೆ. 

‘ಮದುವೆಯಾದ ನಂತರವೂ ಮಹಿಳೆಗೆ ತನ್ನ ಸ್ವಂತಿಕೆ ಮತ್ತು ವ್ಯಕ್ತಿತ್ವ ಉಳಿಸಿಕೊಳ್ಳುವ ಹಕ್ಕಿದೆ. ಹೆಂಡತಿ ಆದ ಮಾತ್ರಕ್ಕೆ ಮಹಿಳೆಯ ಅಸ್ಮಿತೆಗೆ ಕುತ್ತು ತರುವಂತಿಲ್ಲ’ ಎಂದೂ ಹೇಳಿದೆ. 

ADVERTISEMENT

‘ಅಶ್ಲೀಲತೆಯ ವ್ಯಸನವು ಕೆಟ್ಟದು ಮತ್ತು ನೈತಿಕವಾಗಿ ಸಮರ್ಥನೀಯವಲ್ಲ. ಆದರೆ, ಇದು ವಿಚ್ಛೇದನಕ್ಕೆ ಕಾನೂನಿನ ಆಧಾರವಾಗುವುದಿಲ್ಲ’ ಎಂದೂ ಅದು ಹೇಳಿದೆ.

‘ಪುರುಷರಲ್ಲಿ ಹಸ್ತಮೈಥುನವನ್ನು ಸಾರ್ವತ್ರಿಕವೆಂದು ಒಪ್ಪಿಕೊಂಡಾಗ, ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದನ್ನು ಕಳಂಕವಾಗಿ ಪರಿಗಣಿಸಲಾಗದು’ ಎಂದು ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

ವಿಚ್ಛೇದನ ನೀಡಲು ನಿರಾಕರಿಸಿದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಪೀಠ, ‘ಸ್ವಯಂ ಆನಂದವು ನಿಷಿದ್ಧವಲ್ಲ’  ಎಂದು ತೀರ್ಪಿನಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.