ADVERTISEMENT

ಮಹದಾಯಿ ನೀರಿಗಾಗಿ ಕಾನೂನು, ರಾಜಕೀಯ ಹೋರಾಟ: ಗೋವಾ ಸಿಎಂ

ಪಿಟಿಐ
Published 25 ಜನವರಿ 2023, 4:28 IST
Last Updated 25 ಜನವರಿ 2023, 4:28 IST
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ (ಸಂಗ್ರಹ ಚಿತ್ರ)
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ (ಸಂಗ್ರಹ ಚಿತ್ರ)   

ಪಣಜಿ: ಮಹದಾಯಿ ನೀರಿಗಾಗಿ ಕಾನೂನು, ತಾಂತ್ರಿಕ ಮತ್ತು ರಾಜಕೀಯ ಹೋರಾಟ ನಡೆಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಅಲ್ಲದೆ ಮಹದಾಯಿ ನದಿ ನೀರಿನ ಹೋರಾಟದಲ್ಲಿ ಗೋವಾ ಸರ್ಕಾರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೂರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕರ್ನಾಟಕದ ಮಹದಾಯಿ ಯೋಜನೆಯ (ಕಳಸಾ-ಬಂಡೂರಿ ನಾಲಾ ಯೋಜನೆ) ಸಮಗ್ರ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಜಲ ಆಯೋಗ ಅನುಮೋದನೆ ನೀಡಿತ್ತು. ಇದನ್ನು ಗೋವಾ ಸರ್ಕಾರವು ವಿರೋಧಿಸಿತ್ತು.

ADVERTISEMENT

ಇದನ್ನೂ ಓದಿ:

ಅಂತರ ರಾಜ್ಯ ನೀರು ಹಂಚಿಕೆ ವಿವಾದದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರವು ಬದ್ಧವಾಗಿದೆ ಎಂದು ಸಿಎಂ ಸಾವಂತ್ ಹೇಳಿದ್ದಾರೆ.

ಯಾರು ಏನೇ ಹೇಳಲಿ, ನಾವು ನಮ್ಮ ನಿರ್ಧಾರದಲ್ಲಿ ಅಚಲರಾಗಿದ್ದೇವೆ. ಮಹದಾಯಿಗಾಗಿ ಏನೇನು ಮಾಡಬೇಕೋ ಅದನ್ನು ಕಾನೂನಾತ್ಮಕವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಮಾಡುತ್ತಿದ್ದೇವೆ. ಅಂತಿಮ ಗೆಲುವು ನಮ್ಮದಾಗಿರಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.