ADVERTISEMENT

ಬಿಜೆಪಿ ಗೂಂಡಾಗಿರಿಗೆ ಸಿಂಹದಂತೆ ಉತ್ತರ ನೀಡಲಿದ್ದೇವೆ: ಮಮತಾ ಬ್ಯಾನರ್ಜಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 13:38 IST
Last Updated 29 ಮಾರ್ಚ್ 2021, 13:38 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ನಂದಿಗ್ರಾಮ: ಬಿಜೆಪಿಯು ನಂದಿಗ್ರಾಮದಲ್ಲಿ ಗೂಂಡಾಗಿರಿ ನಡೆಸುತ್ತಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ನಂದಿಗ್ರಾಮದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿರುವ ಅವರು ಸೋಮವಾರ ಪಾದಯಾತ್ರೆ, ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾರೆ.

ನಂದಿಗ್ರಾಮದಲ್ಲಿ ತಮ್ಮ ವಿರುದ್ಧ ನಡೆದ ಹಲ್ಲೆ ಯತ್ನವನ್ನು ನೆನಪಿಸಿಕೊಂಡ ಮಮತಾ, 'ಅವರು ನನ್ನ ಮೇಲೆ ಹಲ್ಲೆ ನಡೆಸಿದರು. ನಂದಿಗ್ರಾಮದ ಯಾರೊಬ್ಬರೂ ನನ್ನ ಮೇಲೆ ಹಲ್ಲೆ ನಡೆಸಿಲ್ಲ. ಆದರೆ ನೀವು (ಬಿಜೆಪಿ) ಬಿಹಾರ, ಉತ್ತರಪ್ರದೇಶದಿಂದ ಕರೆಸಿಕೊಂಡ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಾವು ಬಯಸುತ್ತಿದ್ದೇವೆ. ಅವರು ಮತ್ತೆ ಬಂದರೆ ಇಲ್ಲಿನ ಮಹಿಳೆಯೆರು ಅವರನ್ನು ಪಾತ್ರೆಗಳಿಂದ ಹೊಡೆಯಬೇಕು' ಎಂದು ಹೇಳಿದ್ದಾರೆ.

ಸಂಸ್ಕೃತಿಯನ್ನು ಪ್ರೀತಿಸದವರು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಮಾಡುವುದು ಸಾಧ್ಯವಿಲ್ಲ. ನಂದಿಗ್ರಾಮದಲ್ಲಿ ಗೂಂಡಾಗಿರಿ ಕಾಣುತ್ತಿದ್ದೇವೆ. ನಾವು ಬಿರುಲಿಯಾದಲ್ಲಿ ಸಭೆ ನಡೆಸಿದ್ದೆವು, ಟಿಎಂಸಿ ಕಚೇರಿಯನ್ನು ಧ್ವಂಸ ಮಾಡಲಾಯಿತು. ಅವರು (ಸುವೇಂದು ಅಧಿಕಾರಿ) ಬಯಸಿದ್ದನ್ನೆಲ್ಲ ಮಾಡುತ್ತಿದ್ದಾರೆ. ನನಗೂ ಆಟವಾಡುವುದಕ್ಕೆ ಗೊತ್ತಿದೆ. ನಾನೂ ಸಿಂಹದಂತೆ ಉತ್ತರ ನೀಡಬಲ್ಲೆ. ನಾನು ಬಂಗಾಳದ ಹುಲಿ ಎಂದು ಮಮತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.