ವಾಷಿಂಗ್ಟನ್: ವರ್ಣಬೇಧದ ವಿರುದ್ಧ ಹೋರಾಟಕ್ಕೆ ಕರೆ ನೀಡಿರುವ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್, ಜಾರ್ಜ್ ಫ್ಲಾಯ್ಡ್ ಅವರ ಆರು ವರ್ಷ ಮಗಳು ಜಿಯಾನ ಜೊತೆಗಿನ ಸಂವಾದವನ್ನು ನೆನಪಿಸಿಕೊಂಡಿದ್ದಾರೆ.
‘ಫ್ಲಾಯ್ಡ್ ಅಂತ್ಯಕ್ರಿಯೆ ಮುನ್ನಾ ದಿನ ನಾನು ಜಿಯಾನ ಜೊತೆಗೆ ಮಾತುಕತೆ ನಡೆಸಿದ್ದೆ. ಆಕೆ ಧೈರ್ಯವಂತೆ. ಆಕೆಯ ಜೊತೆಗಿನ ಮಾತುಕತೆ ಮರೆಯಲು ಸಾಧ್ಯವಿಲ್ಲ. ಆಕೆಯ ಜೊತೆ ಮಾತನಾಡಲು ನಾನು ಬಗ್ಗಿದ ವೇಳೆ ಆಕೆ ನನ್ನ ಕಣ್ಣಲ್ಲಿ ಕಣ್ಣನಿಟ್ಟು, ‘ಅಪ್ಪ ಜಗತ್ತನ್ನೇ ಬದಲಾಯಿಸಿದರು’ ಎಂದ ಮಾತು ನನ್ನ ಹೃದಯದಲ್ಲಿ ಆಳವಾಗಿ ಉಳಿದಿದೆ. ಅಮೆರಿಕದಲ್ಲಿ ವರ್ಣಬೇಧದ ವಿರುದ್ಧದ ಸಿಡಿದೇಳಲು ಫ್ಲಾಯ್ಡ್ ಸಾವು ಕಾರಣವಾಯಿತು’ ಎಂದು ಬೈಡನ್ ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿಪೊಲೀಸ್ ಕಸ್ಟಡಿಯಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೃತಪಟ್ಟಿದ್ದರು.‘ಇದೊಂದು ಜನಾಂಗೀಯ ದ್ವೇಷದ ಕೃತ್ಯ’ ಎಂದು ಕಪ್ಪು ವರ್ಣೀಯರು ಅಮೆರಿಕದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ವಿಶ್ವದಾದ್ಯಂತ ಬೆಂಬಲ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.