ADVERTISEMENT

ಇದೇ ನೋಡಿ‌ ಅಚ್ಚೇ ದಿನ್: ಮುಂಬೈ ಬೀದಿಗಳಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ ಬ್ಯಾನರ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 9:50 IST
Last Updated 22 ಫೆಬ್ರುವರಿ 2021, 9:50 IST
ಮುಂಬೈನ ಪೆಟ್ರೋಲ್ ಬಂಕ್ ವೊಂದರ ಬಳಿ ಯುವ ಸೇನೆ ಹಾಕಿರುವ ಬ್ಯಾನರ್ - ಎಎನ್ಐ ಚಿತ್ರ
ಮುಂಬೈನ ಪೆಟ್ರೋಲ್ ಬಂಕ್ ವೊಂದರ ಬಳಿ ಯುವ ಸೇನೆ ಹಾಕಿರುವ ಬ್ಯಾನರ್ - ಎಎನ್ಐ ಚಿತ್ರ   

ಮುಂಬೈ: ತೈಲ ದರ ಏರಿಕೆಯ ವಿರುದ್ಧ ಶಿವಸೇನೆಯ ಯುವ ಘಟಕ 'ಯುವ ಸೇನೆ'ಯು ಮುಂಬೈನ ಬೀದಿಗಳಲ್ಲಿ ಬ್ಯಾನರ್‌ ಹಾಕಿ ಪ್ರತಿಭಟನೆ ನಡೆಸುತ್ತಿದೆ.

ಗ್ಯಾಸ್‌, ಪೆಟ್ರೋಲ್‌, ಡಿಸೇಲ್‌ಗಳ ಬೆಲೆ 2015ರಲ್ಲಿ ಎಷ್ಟಿತ್ತು, 2021ರಲ್ಲಿ ಎಷ್ಟಾಗಿದೆ ಎಂಬುದರ ಪಟ್ಟಿಯುಳ್ಳ ಬ್ಯಾನರ್‌ಗಳನ್ನು ಬಾಂದ್ರಾ ಪ್ರದೇಶದ ಬೀದಿಗಳಲ್ಲಿ, ಪೆಟ್ರೋಲ್‌ ಬಂಕ್‌ಗಳ ಬಳಿ ಹಾಕಲಾಗಿದೆ.

ADVERTISEMENT

ಯುವ ಸೇನೆ ಹಾಕಿರುವ ಈ ಬ್ಯಾನರ್‌ಗಳಲ್ಲಿ 'ಇದೇ ನೋಡಿ ಅಚ್ಚೇ ದಿನ್‌' ಎಂದು ಶೀರ್ಷಿಕೆ ನೀಡಲಾಗಿದೆ. ಈ ಮೂಲಕ ತೈಲ ದರ ಏರಿಕೆ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದೆ.

ಕಳೆದ ಹಲವು ದಿನಗಳಿಂದ ತೈಲ ದರ ಏರುಗತಿಯಲ್ಲಿ ಸಾಗುತ್ತಿದ್ದು, ಕೆಲವು ನಗರಗಳಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ ₹100 ತಲುಪಿದೆ.

ಗ್ರಾಹಕರಿಗೆ ಇಂಧನವನ್ನು ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚೆ ನಡೆಸಬೇಕಿದೆ ಎಂದು ಸೀತಾರಾಮನ್ ಹೇಳಿದ್ದರು.

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಅಂತರರಾಷ್ಟ್ರೀಯ ದರ ವ್ಯವಸ್ಥೆ ಆಧರಿಸಿ ನಿರ್ಧಾರವಾಗುತ್ತಿದೆ. ಹೀಗಿರುವಾಗ, ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ತಪ್ಪು’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.