ADVERTISEMENT

ಜುಬೀನ್ ಗರ್ಗ್ ಸಾವು: 3,500ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 8:31 IST
Last Updated 12 ಡಿಸೆಂಬರ್ 2025, 8:31 IST
<div class="paragraphs"><p>ಜುಬೀನ್ ಗರ್ಗ್‌</p></div>

ಜುಬೀನ್ ಗರ್ಗ್‌

   

ಗುವಾಹಟಿ: ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣ ತನಿಖೆ ನಡೆಸುತ್ತಿರುವ ಅಸ್ಸಾಂ ಸಿಐಡಿಯ ವಿಶೇಷ ತನಿಖಾ ತಂಡ ಶುಕ್ರವಾರ ಗುವಾಹಟಿಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಸಿಐಡಿಯ ವಿಶೇಷ ಐಜಿ ಪ್ರಸಾಸ್ ಗುಪ್ತಾ ನೇತೃತ್ವದ ತನಿಖಾ ತಂಡ 3,500ಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಪ್ರಧಾನ ಮ್ಯಾಜಿಸ್ಟ್ರೇಟ್ ಕಾಮರೂಪ (ಮೆಟ್ರೊ) ಅವರಿಗೆ ಸಲ್ಲಿಸಿತು.

ADVERTISEMENT

ಬೆಳಿಗ್ಗೆ ಸುಮಾರು 11.20ರ ವೇಳೆಗೆ ದಾಖಲೆಗಳು ತುಂಬಿದ್ದ 4 ಟ್ರಂಕ್‌ಗಳನ್ನು ಕೋರ್ಟ್‌ಗೆ ತೆಗೆದುಕೊಂಡು ಹೋಗಲಾಯಿತು.

ಪ್ರಕರಣ ಸಂಬಂಧ ಜುಬೀನ್ ಅವರ ವ್ಯವಸ್ಥಾಪಕ, ಅವರ ಸೋದರ ಸಂಬಂಧಿ ಹಾಗೂ ಸಿಂಗಪುರದಲ್ಲಿ ಕಾರ್ಯಕ್ರಮದ ಆಯೋಜಕರನ್ನು ಎಸ್‌ಐಟಿ ಈಗಾಗಲೇ ಬಂಧಿಸಿದೆ. ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ಸಿಂಗಪುರದಲ್ಲಿ ಇರುವ ಅಸ್ಸಾಮಿ ಎನ್‌ಆರ್‌ಐಗಳು ಸೇರಿ 300ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.